ಧಾರವಾಡ : ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು,ಜಿಲ್ಲಾ ಪಂಚಾಯತ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ್ ಭವನ್ ಸಮಿತಿ ಧಾರವಾಡ ಇವರ ಸಹಯೋಗದಲ್ಲಿ ಜಿಲ್ಲಾ ಭವನದ ಆವರಣದಲ್ಲಿ ಜರುಗುತ್ತಿರುವ 2025 – 26ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಳೆಯ ನಾಣ್ಯ, ನೋಟುಗಳ ಸಂಗ್ರಹಾಕರಾದ ಕಲಘಟಗಿಯ ಸುನಿಲ್ ಕಮ್ಮಾರ್ ಅವರು ನಾಣ್ಯ ಪ್ರದರ್ಶನ ಏರ್ಪಡಿಸಿದರು.
ಶಿಬಿರದ ಮಕ್ಕಳಿಗೆ ಹಳೆಯ ನಾಣ್ಯ, ನೋಟುಗಳ ಬಗ್ಗೆ ಮಾಹಿತಿಯನ್ನು ನೀಡಿದ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ನಾಣ್ಯಗಳ ಪರಿಚಯ, ಅಧ್ಯಯನದ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟು ಅವಶ್ಯವಾಗಿದೆ. ರಾಜ, ಮಹಾರಾಜರ ಕಾಲದಿಂದಲೂ ನಾಣ್ಯಗಳು ವಸ್ತು ವಿನಿಮಯ ಗೋಸ್ಕರ ಬಳಕೆಗೆ ಬಂದವವು ಎಂದರು.
ಇತಿಹಾಸ ಕಾಲದಿಂದಲೂ ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ ಮುಂತಾದ ಲೋಹದ ಮೌಲ್ಯಯುತವಾದ ನಾಣ್ಯಗಳು ವಿಶಿಷ್ಟ ಬಗೆಗಳಲ್ಲಿ ಮುದ್ರಣ ಗೊಂಡಿದ್ದವು. ಪ್ರಾಚೀನ ಕಾಲದ ನಾಣ್ಯಗಳಿಗೆ ಅದರದೇ ಮಹತ್ವ ಪಡೆದ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ನಾಣ್ಯಗಳು ಮರೆ ಆಗುತ್ತಿವೆ ಎಂದು ಅವರು ಹೇಳಿದರು.
ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ವಿಜಯನಗರ ಮತ್ತು ಮೈಸೂರು ರಾಜರ, ಟಿಪ್ಪು ಸುಲ್ತಾನ್, ನಿಜಾಮ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಸಂದರ್ಭಗಳಲ್ಲಿ ಭಾರತ ಹಾಗೂ ಬೇರೆ ಬೇರೆ ದೇಶಗಳ ಸೆಂಟ್ಸ್, ಪೌಂಡ್, ಡಾಲರ್, ಮುಂತಾದವು ಚಲಾವಣೆಯಲ್ಲಿರುವ ಬಗ್ಗೆ ಹಾಗೂ ಕರೆನ್ಸಿ ನೋಟುಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ.ಹೆಚ್.ಹೆಚ್. ಕುಕನೂರ, ಡಾ.ಕಮಲ ಬೈಲೂರು, ಕಾಂಚನ ಅಮಟೆ, ಸುಭಾಷ್ ಚಂದ್ರಗಿರಿ, ಉಮಾದೇವಿ ಹೂಗಾರ್, ಜಯಶ್ರೀ ಮಣ್ಣಿಕೇರಿ, ಶಶಿಧರ್ ಮುಂದಿನಮನಿ, ಸುನಿತಾ ನಾಡಿಗೇರ, ಕಮಲಾ ಮಸಣ್ಣಿ, ಅಶೋಕ್ ಬೆಳ್ಳಿಗಟ್ಟಿ, ಮಂಜುನಾಥ್ ಬದ್ನಿಗಟ್ಟಿ, ಮಂಜುಳಾ ಬೆನಕನಹಳ್ಳಿ, ಯಶೋಧ ತಾಯಿ ಭಜಂತ್ರಿ, ರವಿ ಹಿರೇಮಠ, ಶಿಬಿರಾರ್ಥಿ ಮಕ್ಕಳು ಹಾಗೂ ಪೋಷಕರು ಇತರರಿದ್ದರು.