ಬಳ್ಳಾರಿ,ಮೇ.24: ಬಳ್ಳಾರಿ ನಗರದಲ್ಲಿ ಕುಡಿಯುವ ನೀರು, ಒಳಚರಂಡಿ, ಹೊರಚರಂಡಿ, ರಸ್ತೆಗಳು ಇತ್ಯಾದಿ ಅವ್ಯವಸ್ಥೆ ಕುರಿತು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮೇ.೨೬ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಮಹಾನಗರ ಪಾಲಿಕೆ ಎದುರುಗಡೆ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕುರಿತು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಸೋಮಶೇಖರ ಗೌಡ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨ ಳಿ ದಶಕಗಳಲ್ಲಿ ಬಳ್ಳಾರಿ ನಗರವು ನಾಲ್ಕು ದಿಕ್ಕುಗಳಲ್ಲಿ ಅತ್ಯಧಿಕವಾಗಿ ವಿಸ್ತರಿಸಿದೆ. ಜನಸಂಖ್ಯೆ ಹೆಚ್ಚಿದೆ, ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ನಗರದ ಸುತ್ತಲೂ ಅನೇಕ ಸಣ್ಣ ಕೈಗಾರಿಕಾ ಘಟಕಗಳು ಹಾಗೂ ಹತ್ತಿರದ ತೋರಣಗಲ್ಲು ಗ್ರಾಮದಲ್ಲಿ ಬೃಹತ್ ಜಿಂದಾಲ್ ಉಕ್ಕಿನ ಕಾರ್ಖಾನೆ, ಹಾಗೂ ಕುಡತಿನಿ ಹತ್ತಿರ ಬೃಹತ್ ಕೆಪಿಟಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಗೊಂಡಿದೆ ಹಾಗೂ ಬಳ್ಳಾರಿ ಮತ್ತು ಸಂಡೂರು ತಾಲೂಕುಗಳಲ್ಲಿ ಗಣಿಗಾರಿಕೆ ಚಟುವಟಿಕೆ ಮೊದಲಿಗಿಂತ ಅನೇಕ ಪಟ್ಟು ಹೆಚ್ಚಿದೆ. ಇವೆಲ್ಲವುಗಳ ಪರಿಣಾಮವಾಗಿ ಸರ್ಕಾರದ ಹಾಗೂ ಮಹಾನಗರ ಪಾಲಿಕೆಯ ಆದಾಯವು ಗಣನೀಯವಾಗಿ ಹೆಚ್ಚಿದೆ.
ಆದರೆ ಈಗಾಗಲೇ ಯಾವತ್ತೋ ಆಗಬೇಕಾಗಿದ್ದ ವರ್ತುಲ ರಸ್ತೆ (ರಿಂಗ್ ರೋಡ್) ಇಲ್ಲಿಯವರೆಗೂ ಆಗಿಲ್ಲ. ನಗರದಲ್ಲಿ ಕಾರುಗಳ ಹಾಗೂ ದ್ವಿಚಕ್ರ ವಾಹನಗಳ ಮತ್ತು ಇತರೇ ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ಈ ಸಂದರ್ಭದಲ್ಲಿ ದಿನಂಪ್ರತಿ ಸಾವಿರಾರು ಭಾರಿ ವಾಹನಗಳು ನಗರದ ಮುಖಾಂತರ ಚಲಿಸುವುದರಿಂದ ಸಾರ್ವಜನಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಬಳ್ಳಾರಿ ನಗರದಲ್ಲಿಯೂ ಮುಖ್ಯ ಮತ್ತು ಅಡ್ಡ ರಸ್ತೆಗಳು ಕಳಪೆ ಮಟ್ಟದ ಕಾಮಗಾರಿಯಿಂದ ಹಾಳಾಗಿವೆ. ಅನೇಕ ರಸ್ತೆಗಳ ತುಂಬಾ ಕುಣಿಗಳು ಅವೈಜ್ಞಾನಿಕ ವೇಗ ತಡೆಗಳ ಪರಿಣಾಮವಾಗಿ, ವಾಹನ ಚಾಲಕರಿಗೆ ಸುರಕ್ಷತೆ ಇಲ್ಲದಂತಾಗಿದೆ.
ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಹೊರಚರಂಡಿ ವ್ಯವಸ್ಥೆ ಕಾಲಕಾಲಕ್ಕೆ ನಿರ್ವಹಣೆ ಇಲ್ಲದೇ ಸಂಪೂರ್ಣ ಹದಗೆಟ್ಟು ಹೋಗಿದೆ. ಅನೇಕ ಸ್ಥಳಗಳಲ್ಲಿ ಆಗಾಗ್ಗೆ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಬರುತ್ತದೆ. ಅನೇಕ ಕಡೆ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊAಡು ಸಾರ್ವಜನಿಕರು ಕಳವಳಗೊಂಡು ಚಿಂತೆಗೀಡಾಗಿದ್ದಾರೆ. ಅಲ್ಲದೆ ನೀರು ತುಂಬಿದ ಸಂಪುಗಳನ್ನು (ತೊಟ್ಟಿಗಳನ್ನು) ಸಾರ್ವಜನಿಕರು ತಮ್ಮ ಸ್ವಂತ ಹಣದಿಂದ ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ.
ನಗರದಲ್ಲಿ ಅನವಶ್ಯಕವಾಗಿ ರಾಯಲ್ ಸರ್ಕಲ್ ಹೊಡೆದು ಹಾಕಿ, ಅವೈಜ್ಞಾನಿಕವಾಗಿ ೭ ಕೋಟಿ ರೂಪಾಯಿ ಖರ್ಚು ಮಾಡಿ, ಟ್ರಾಫಿಕ್ ಸುಗಮ ಸಂಚಾರಕ್ಕೆ ಬದಲಾಗಿ, ಸಮಸ್ಯೆ ಉಂಟು ಮಾಡಲಾಗಿದೆ.
ಎಸ್.ಪಿ ಸರ್ಕಲ್‌ನಲ್ಲಿಯೂ ಇದೇ ರೀತಿಯಾಗಿ ಮೊದಲಿದ್ದ ಸರ್ಕಲ್‌ಗಳನ್ನು ಹೊಡೆದುಹಾಕಿ ಅನವಶ್ಯಕವಾಗಿ ದುಂದುವೆಚ್ಚ ಮಾಡಿ ಸರ್ಕಲ್ ಮಾಡಲಾಗುತ್ತಿದೆ. ಈ ಎರಡೂ ಸರ್ಕಲ್‌ಗಳ ಅವಶ್ಯಕತೆ ಇತ್ತೇ? ಇಲ್ಲವಾದಲ್ಲಿ ಯಾವ ಕಾರಣಕ್ಕೆ ಇಂತಹ ಅವೈಜ್ಞಾನಿಕ ಸರ್ಕಲ್‌ಗಳು?.
ನಗರದಲ್ಲಿ ೨೪/೭ ಕುಡಿಯುವ ನೀರಿನ ಯೋಜನೆಗೆ ೧೬೦ ಕೋಟಿಗಿಂತಲೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಈ ಯೋಜನೆ ಕೈಗೊಂಡು ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಸಂಪೂರ್ಣ ವಿಫಲವೆನ್ನುವುದೇ ಅನೇಕ ಜನರ ಅಭಿಪ್ರಾಯವಾಗಿದೆ.
ನಗರಾದ್ಯಂತ ಬೀದಿ ನಾಯಿಗಳು, ಬಿಡಾಡಿ ದನಗಳು, ಅಪಘಾತಕ್ಕೆ ಕಾರಣವಾಗಿವೆ. ಅನೇಕರು ಅಪಘಾತಕ್ಕೀಡಾಗಿ ಬಲಿಪಶುಗಳಾಗಿದ್ದಾರೆ. ಇದಕ್ಕೆ ಹತ್ತಾರು ಬಾರಿ ಮನವಿ ಕೊಟ್ಟರೂ ಫಲಿತಾಂಶ ಶೂನ್ಯ.
ಜಿಲ್ಲೆಯಲ್ಲಿ ಅನೇಕ ಸಣ್ಣ ಕೈಗಾರಿಕೆಗಳು, ಗಣಿಗಾರಿಕೆ, ಹಾಗೂ ಬೃಹತ್ ಕೈಗಾರಿಕೆಗಳ ಪರಿಣಾಮವಾಗಿ ಬಾರಿ ವಾಹನಗಳ ಸಂಖ್ಯೆ ಹೆಚ್ಚಿದೆ. ಇವು ನಗರದ ಮೂಲಕ ಹಾದು ಹೋಗುವುದರಿಂದ, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ, ಜನತೆಗೆ ಸುರಕ್ಷತೆ ಇಲ್ಲದಂತಾಗಿದೆ. ನಗರಕ್ಕೆ ವರ್ತುಲ ರಸ್ತೆ ಆಧ್ಯತೆಯಾಗಬೇಕಾಗಿತ್ತು. ಆದರೆ ವರ್ತುಲ ರಸ್ತೆ ನಿರ್ಮಾಣ ಆಮೆ ವೇಗದಲ್ಲಿ ಸಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ನಗರದಲ್ಲಿ ಅಸುರಕ್ಷಿತ ಹಾಗೂ ಅನಾರೋಗ್ಯಕರ ವಾತಾವರಣ ಆವರಿಸಿದೆ. ಆದ್ಯತೆ ಮೇರೆಗೆ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ನಿರ್ವಹಣೆ (ಒಚಿiಟಿಣeಟಿಚಿಟಿಛಿe) ಇಲ್ಲ ಸ್ವಚ್ಛತೆ ಅಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ರಸ್ತೆ, ಸೇತುವೆ ಇತರೇ ಕಾಮಗಾರಿಗಳು ಪ್ರಾರಂಭಿಸಿದ ನಂತರ ವರ್ಷಗಳು ಕಳೆದರೂ ಪೂರ್ಣಗೊಳ್ಳುವುದಿಲ್ಲ.
ಬೇಡಿಕೆಗಳು: ನಗರದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಬೆರೆಯದಂತೆ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಿಳ್ಳಬೇಕು. ನಗರದ ಎಲ್ಲಾ ಹೊರ ಚರಂಡಿಗಳಲ್ಲಿ ತುಂಬಿದ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು. ನಗರದಲ್ಲಿ ಅಲ್ಪ ಮಳೆ ಬಂದರೂ ಅನೇಕ ರಸ್ತೆಗಳಲ್ಲಿ ಹೊಂಡಾಗಳು ನಿರ್ಮಾಣವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಅಪಘಾತಕ್ಕೆ ಕಾರಣವಾಗಿರುವ ಬೀದಿ ನಾಯಿ, ಬೀಡಾಡಿ ದನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ನಗರಕ್ಕೆ ಅವಶ್ಯಕವಾದ ವರ್ತುಲ ರಸ್ತೆಯನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ, ಅಲ್ಲಿಯವರೆಗೆ ಹಗಲಿನ ವೇಳೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕು. ನಗರದಲ್ಲಿ ಅನಾವಶ್ಯಕ ಯಾರೂ ಬೇಡದ, ದುಂದು ವೆಚ್ಚ ಮಾಡಿ ಅವೈಜ್ಞಾನಿಕ ಸರ್ಕಲ್‌ಗಳ ನಿರ್ಮಾಣ ಬೇಡ, ಬದಲಾಗಿ ಆದ್ಯತೆ ಮೇರೆಗೆ ಅವಶ್ಯಕವಾದ ಮೋತಿ ಬ್ರಿಡ್ಜ್ ಅಗಲೀಕರಣ, ಕೆಟ್ಟು ಹಾಳಾಗಿರುವ ಒಳ ರಸ್ತೆಗಳ ನಿರ್ಮಾಣ, ರಸ್ತೆ ಬದಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಹೊರ ಚರಂಡಿ ನಿರ್ಮಾಣ ಸೇರಿದಂತೆ ಜನ ಬಯಸುವ ಕೆಲಸಗಳನ್ನು ಕೈಗೊಳ್ಳಬೇಕು. ನಗರಾದ್ಯಂತ ಆರೋಗ್ಯಕರ ವಾತಾವರಣ ಕಲ್ಪಿಸಲು ಸ್ವಚ್ಛತೆ ಕಾಪಾಡಲು, ದೂಳಿನ ಪ್ರಮಾಣ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿ ಬಗ್ಗೆ ಎಲ್ಲಾ ವಿವರಗಳನ್ನು ನೀಡುವ ಫಲಕಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಗೋಚರಿಸುವ ಸ್ಥಳಗಳಲ್ಲಿ ಪ್ರದರ್ಶಿಸಿ ಹಾಗೂ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಲಹೆಗಾರರಾದ ನರಸಣ್ಣ, ಮುರ್ತುಜಾ ಸಾಬ್, ಸಮಿತಿ ಸದಸ್ಯರಾದ ಗುರುರಾಜ್, ಡಾ.ಪ್ರಮೋದ್, ಶಾಂತಾ, ನಾಗರತ್ನ, ಸುರೇಶ್, ಅಂತೋನಿ, ವಿದ್ಯಾ ಉಪಸ್ಥಿತರಿದ್ದರು.