ಬೆಂಗಳೂರು, ಮೇ 24: ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದ ಕೊರೋನಾ ಮಾಹಾಮಾರಿ ತನ್ನ ಕರಾಳ ಮುಖವನ್ನು ಪುನಃ ಪ್ರದರ್ಶಿಸತೊಡಗಿದೆ. ಲಭ್ಯರುವ ಮಾಹಿತಿ ಪ್ರಕಾರ ನಿನ್ನೆಯೊಂದೇ ದಿನ ಮಹಾರಾಷ್ಟ್ರದಲ್ಲಿ 45 ಜನ ಕೊರೋನಾ ಸೋಂಕಿನಿಂದ ಬಳಲುತ್ತಿರುವುದು ಪತ್ತೆಯಾಗಿದೆ.
ಕಳೆದ ಜನೆವರಿಯಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 6,891 ಜನರ ಕೊರೋನಾ ಟೆಸ್ಟ್ ನಡೆಸಲಾಗಿದ್ದು 216 ಜನಕ್ಕೆ ಸೋಂಕು ತಗುಲಿರುವುದು ಮತ್ತು ಮೂರು ಜನ ಮಹಾಮಾರಿಗೆ ಬಲಿಯಾಗಿರುವ ಮಾಹಿತಿ ಇದೆ. ದೆಹಲಿ, ಕೇರಳದಲ್ಲೂ ಕೊರೋನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ ಮತ್ತು ಸರ್ಕಾರಗಳು ಮಾರ್ಗಸೂಚಿಯನ್ನು ಜಾರಿಗೊಳಿಸಿವೆ.