ರನ್ನ ಬೆಳಗಲಿ: ಮೇ.೨೪., ಪಟ್ಟಣದ ೧೪ನೇ ವಾರ್ಡಿನ ಹಿಪ್ಪರಗಿ ಹಾಗೂ ಒಂಟಗೋಡಿ ಓಣಿಯಲ್ಲಿ ಚರಂಡಿ ನೀರು ಸಾರ್ವಜನಿಕರ ರಸ್ತೆ ಮೇಲೆ ಪೋಲಾಗುತ್ತಿರುವುರಿಂದ, ಸಾರ್ವಜನಿಕರ ಸಂಚಾರ ಸಂಪೂರ್ಣ ಬಂಧ ಆಗಿರುತ್ತದೆ. ಚರಂಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ನೀರು ಮುಂದು ಹರಿಯದೆ ಇರುವುದರಿಂದ ಸುತ್ತ ಮುತ್ತಲಿನ ಮನೆಯವರಿಗೆ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ ಹೀಗಾಗಿ ಆದ? ಬೇಗ ಈ ಸಮಸ್ಯೆಯಿಂದ ಮುಕ್ತಿ ನೀಡಬೇಕೆಂದು ಹಾಗೂ ಸುರಕ್ಷಿತವಾದ ಒಳಚರಂಡಿ ಪುನರ್ ನವೀಕರಣಗೊಳ್ಳಬೇಕೆಂದು ಪ್ರತಿಭಟನೆಯ ನೆತೃತ್ವ ವಹಿಸಿದ ವಿಠ್ಠಲ ಕರಡಿ ಯವರು ಪಟ್ಟಣ ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕರಾದ ಪಿ ಡಿ ನಾಗನೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಹಾಲಿಂಗಪ್ಪ ಒಂಟಗೋಡಿ, ಯಶವಂತ ಒಂಟಗೋಡಿ, ಈಶ್ವರ ಜೈನಾಪುರ, ಶ್ರೀಶೈಲ ಚಿಚಖಂಡಿ , ಬಾಳಪ್ಪ ಹುಲ್ಯಾಳ, ಮಹಾಂತೇಶ ಚಿಚಖಂಡಿ, ಶೋಭಾ ಒಂಟಗೋಡಿ ಇನ್ನಿತರರು ಉಪಸ್ಥಿತರಿದ್ದರು.