ಬಳ್ಳಾರಿ,ಮೇ 23.ನಗರದ ಈದ್ಗಾ ರಸ್ತೆಯ ಹಿರಿಯಾಳ್ ಕುಡಂ ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ೨೦೨೫-೨೬ ನೇ ಸಾಲಿಗೆ ೬ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.
ಈಗಾಗಲೇ ೬ನೇ ತರಗತಿ ಪ್ರವೇಶ ಪರೀಕ್ಷೆಯ ಮೊದಲನೇ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳ ಪಾಲಕರ ಮೊಬೈಲ್ ಗೆ ಸಂದೇಶ ಕಳುಹಿಸಲಾಗಿದೆ. ದಾಖಲಾತಿ ಹೊಂದಲು ಮೇ ೨೯ ಕೊನೆಯ ದಿನವಾಗಿದೆ.
*ದಾಖಲೆ:*-ಪ್ರವೇಶಾತಿ ಅರ್ಜಿ, ವರ್ಗಾವಣೆ ಪ್ರಮಾಣ ಪತ್ರ(ಮೂಲ) ಮತ್ತು ೨ ಜೆರಾಕ್ಸ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ, ತಂದೆ-ತಾಯಿಯ ಆಧಾರ್ ಪ್ರತಿ, ಅಂಗವಿಕಲ ವಿದ್ಯಾರ್ಥಿಯಾಗಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ(ಬೇರೆ ತಾಲ್ಲೂಕಿನವರಿಗೆ ಮಾತ್ರ), ೫ನೇ ತರಗತಿ ಅಂಕಪಟ್ಟಿ ಮೂಲ(ಜೆರಾಕ್ಸ್ ಪ್ರತಿ ೨), ಪ್ರವೇಶ ಪರೀಕ್ಷೆಯ ಹಾಲ್ಟಿಕೇಟ್, ವಿದ್ಯಾರ್ಥಿಯ ಆರೋಗ್ಯ ಕಾರ್ಡ್, ಇತ್ತೀಚಿನ ೪ ಭಾವಚಿತ್ರ, ಮೊಬೈಲ್ ಸಂಖ್ಯೆ, ಪಡಿತರ ಜೆರಾಕ್ಸ್ ಪ್ರತಿ ಮತ್ತು ಭಾಗ್ಯಲಕ್ಷ್ಮಿ ಬಾಂಡ್ ಪ್ರತಿ(ವಿದ್ಯಾರ್ಥಿನಿಯರಿಗೆ ಮಾತ್ರ).
ಆಯ್ಕೆಯಾದ ವಿದ್ಯಾರ್ಥಿಗಳು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಪೂರಕ ದಾಖಲೆಗಳೊಂದಿಗೆ ಶಾಲೆಗೆ ಹಾಜರಾಗಿ ದಾಖಲಾತಿ ಹೊಂದಬೇಕು ಎಂದುಶಾಲೆಯ ಮುಖ್ಯೋಪಾಧ್ಯಯರಾದ ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.