ಹಲೋ ಸರ್ … ಹೀಗೊಂದು ಸಿನಿಮಾ 

Ravi Talawar
ಹಲೋ ಸರ್ … ಹೀಗೊಂದು ಸಿನಿಮಾ 
WhatsApp Group Join Now
Telegram Group Join Now
     ಈ ಹಿಂದೆ ಮುಕ್ತಿ, ತ್ರಿಪುರ,ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ್ದ  ಕೆ.ಶಂಕರ್ ಅವರ ನಿರ್ದೇಶನದ   ಮತ್ತೊಂದು ಚಿತ್ರ ‘ಹಲೋ ಸರ್’. ಕನ್ನಡ, ತೆಲಗು, ತಮಿಳು ಸೇರಿದಂತೆ 3 ಭಾಷೆಗಳಲ್ಲಿ ನಿರ್ಮಾಣ ವಾಗಿರುವ ಈ ಚಿತ್ರಕ್ಕೆ ಶಂಕರ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿದ್ದಾರೆ.
      ಸಮಾಜದಲ್ಲಿ, ತಿಳಿದೂ ತಿಳಿದೂ,  ಅಪರಾಧ ಕೃತ್ಯ ತಪ್ಪು ಮಾಡಿ,  ತಮ್ಮ, ಹಣ ಬಲ, ಜನರ ಸಾಮರ್ಥ್ಯವನ್ನು ಬಳಸಿಕೊಂಡು, ಪ್ರಾಮಾಣಿಕರ ಹಾಗೂ ಪೊಲೀಸ್ ಮತ್ತು  ರಾಜಕಾರಣಿಗಳ ವಿರುದ್ಧ ಸಮರ ಸಾರುವ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ  ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಚಿತ್ರದಲ್ಲಿದೆ.ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು  ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯೂ ಹೌದು.
   ಚಿತ್ರದ ನಾಯಕನಾಗಿ ರಾಜಬಾಲ ನಟಿಸಿದ್ದಾರೆ.‌ ಈಗಾಗಲೇ  ತೆಲುಗಲ್ಲಿ 7 to 4, ಚಿತ್ರಂ, ಲವ್ ಬೂಮ್, ತೊಂಗಿ ತೊಂಗಿ ಚುದಾಮುಕ್ಕು ಚಂದಮಾಮ, ಮೈತ್ರಿವಾನಂ, ಅಂತಕು ಮಿಂಚು, ಚಿತ್ರಗಳಲ್ಲಿ ನಟಿಸಿರುವ ರಾಜಬಾಲ ಅವರಿಗೆ ಕನ್ನಡದಲ್ಲಿದು ಮೊದಲ ಚಿತ್ರ, ಸ್ವಾತಿ ಲಿಂಗರಾಜ್ ಚಿತ್ರದ ನಾಯಕಿಯಾಗಿ ನಟಿಸಿದ್ದು,  ಎಸ್. ನಾರಾಯಣ್‌ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
    ಶ್ರೀ ಅಂಕುರ ಕ್ರಿಯೆಷನ್ ಬ್ಯಾನರ್ ಅಡಿ ಎಲ್. ಮಂಜುನಾಥ್,   ಹೆಚ್‌. ಪಿ.  ಮಹೇಶ್ ಮತ್ತು ವೆಂಕಟೇಶ್
ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಂ.ಎನ್.ಕೃಪಾಕರ್ ಅವರ ಸಂಗೀತ, ಚಂದ್ರು ಸೊಂಡೇಕೊಪ್ಪ, ಸೂರ್ಯೋದಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಕೆ.ಶಿವಣ್ಣ, ಕಿಲ್ಲರ್ ವೆಂಕಟೇಶ್, ರಮಾನಂದ್, ಬೇಬಿ ಎಸ್ ಪವಿತ್ರ, ಉಳಿದ ತಾರಾಗಣದಲ್ಲಿದ್ದಾರೆ. ಮಂಗಳೂರು, ಮಂಡ್ಯ, ಬೆಂಗಳೂರು, ಮತ್ತು ಹೈದರಾಬಾದ್ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯ  ಚಿತ್ರವೀಗ  ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.  ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.
WhatsApp Group Join Now
Telegram Group Join Now
Share This Article