ನಿದ್ರಾದೇವಿ Next Door ಸಿನಿಮಾಗೆ ದುನಿಯಾ ವಿಜಯ್ ಸಾಥ್…  

Ravi Talawar
ನಿದ್ರಾದೇವಿ Next Door ಸಿನಿಮಾಗೆ ದುನಿಯಾ ವಿಜಯ್ ಸಾಥ್…  
WhatsApp Group Join Now
Telegram Group Join Now
     ಈಗಾಗಲೇ ಟೀಸರ್ ಮೂಲಕ ಗಮನಸೆಳೆದಿರುವ ‘ನಿದ್ರಾದೇವಿ’ Next Door ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ.
      ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ದುನಿಯಾ ವಿಜಯ್ ಕುಮಾರ್ ಸ್ಲಿಪ್ ಲೆಸ್ ಆಂಥೆಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದರು. ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಸುರಾಗ್ ಸಾಗರ್ ಆಕ್ಷನ್ ಕಟ್ ಹೇಳಿದ್ದಾರೆ.
      ದುನಿಯಾ ವಿಜಯ್ ಕುಮಾರ್ ಮಾತನಾಡಿ “ಸಾಂಗ್ ತುಂಬಾ ಚೆನ್ನಾಗಿದೆ. ಹೀರೋ ಕೂಡ ಮುದ್ದಾಗಿ ಕಾಣಿಸುತ್ತಾರೆ. ಹೀರೋಯಿನ್ ಕೂಡ ಚೆನ್ನಾಗಿ ಕಾಣಿಸುತ್ತಾರೆ. ಪ್ರವೀರ್ ಡ್ಯಾನ್ಸ್ ಎನರ್ಜಿ ನೋಡಿ ಖುಷಿಯಾಯ್ತು.  ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದ ಅವರು, ಹಾಡಿನ  ಸಾಹಿತ್ಯವನ್ನು ಕೇಳಿ ಇಂಡಸ್ಟ್ರಿಯಲ್ಲಿ ನಡೆಯುವ ಸಮಸ್ಯೆಗಳಿಗೆ ಫನ್ನಿಂಗ್ ಯಾಗಿ ಹೋಲಿಕೆ ಮಾಡಿದರು. ಲಿರಿಕ್ಸ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
     ನಟ ಪ್ರವೀರ್ ಶೆಟ್ಟಿ  “ಈ ದಿನಕ್ಕೆ ಬಹಳ ದಿನದಿಂದ ಕಾಯುತ್ತಿದ್ದೆ. ಸಾಂಗ್ ಬಿಡುಗಡೆಯಾಗಿದೆ. ಈ ಸಾಂಗ್ ಹಿಂದೆ ತುಂಬಾ ಜನ ಕಷ್ಟಪಟ್ಟಿದ್ದಾರೆ. ಡೈರೆಕ್ಟರ್, ಅವರ ಪತ್ನಿ, ನಕುಲ್, ಗುಬ್ಬಿ ಎಲ್ಲರೂ ಒಟ್ಟಿಗೆ ಸೇರಿ ಹಾಡು ಮಾಡಿದ್ದಾರೆ. ತಾರಕ್ ಮಾಸ್ಟರ್ ತುಂಬಾ ಚೆನ್ನಾಗಿ ಕೊರಿಯೋಗ್ರಫಿ ಮಾಡಿದ್ದಾರೆ” ಎಂದು ಹೇಳಿದರು.
     ನಿರ್ಮಾಪಕ ಜಯರಾಮ್ “ನಾನು‌ ಲಕ್ಕಿ. ನಾನು ಸಿನಿಮಾ‌ ಮಾಡುವುದು, ಅದನ್ನು ಸಪೋರ್ಟ್ ಮಾಡುವುದು ಒಂದು ಕಡೆಯಾದರೆ, ಸಿನಿಮಾ ಮಾಡಿ ಆದಮೇಲೆ ನಿಜವಾದ ಜರ್ನಿ ಶುರುವಾಗುವುದು. ನಾನು ಈಗ ಆ ಜರ್ನಿ‌ ನೋಡುತ್ತಿದ್ದೇನೆ. ಚಿತ್ರವನ್ನು ಜನರಿಗೆ ತಲುಪಿಸುವುದು ಕಷ್ಟ ಅನ್ನುವುದು ಅರಿವಾಗುತ್ತಿದೆ. ಪ್ರತಿ ಹೆಜ್ಜೆಯಲ್ಲಿ ದೊಡ್ಡ ದೊಡ್ಡ ಹೀರೋಗಳು ಸಾಥ್ ಕೊಟ್ಟಿದ್ದಾರೆ. ಹೊಸ ಪ್ರೊಡಕ್ಷನ್ ಹೌಸ್ ಆದರೂ ಬಹಳ ಸಪೋರ್ಟ್ ಸಿಕ್ಕಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ಇಡೀ ಸ್ಟಾರ್ ಕಾಸ್ಟ್ ಅದ್ಭುತವಾಗಿ ನಟಿಸಿದ್ದಾರೆ” ಎಂದರು.
     ನಿರ್ದೇಶಕ ಸುರಾಗ್ “ಕಷ್ಟಪಟ್ಟು ಮಾಡಿದ ಸಾಂಗ್ ದೊಡ್ಡ ಸ್ಕ್ರೀನ್ ಮೇಲೆ ನೋಡಲು‌ ಖುಷಿಯಾಯ್ತು. ದುನಿಯಾ ವಿಜಯ್ ಸರ್ ಸಾಂಗ್ ರಿಲೀಸ್ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮ‌ ವಿಷನ್ ಗೆ ಸಪೋರ್ಟ್ ಕೊಟ್ಟಿರುವುದು ನಮ್ಮ ಪ್ರೊಡ್ಯೂಸರ್ ಸರ್. ಈ ಸಾಂಗ್ ನಲ್ಲಿ ಪ್ರವೀರ್ ತುಂಬಾ ಕಷ್ಟಪಟ್ಟು ಡ್ಯಾನ್ ಮಾಡಿದ್ದಾರೆ. ಕಾಲು ಕ್ರ್ಯಾಂಪ್ ಆಗಿದ್ದರೂ ಕೂಡ ಬೇಕಿಂಗ್ ಸೋಡಾ ತೆಗೆದುಕೊಂಡು 16 ಗಂಟೆ ಬ್ಯಾಕ್ ಟು ಬ್ಯಾಕ್ ಡ್ಯಾನ್ ಮಾಡಿದ್ದಾರೆ” ಎಂದರು.
     ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ನಿರ್ಮಾಪಕರಾದ ಜಯರಾಮ್ ದೇವಸಮುದ್ರ ರವರು ತಮ್ಮ ಸುರಮ್ ಮೂವೀಸ್ ಬ್ಯಾನರ್ನಡಿಯಲ್ಲಿ  ನಿರ್ಮಿಸಿದ್ದು ಈ ಸಿನಿಮಾಗೆ ನಕುಲ್ ಅಭ್ಯಂಕರ್ ಸಂಗೀತ, ಅಜಯ್ ಕುಲಕರ್ಣಿ ಛಾಯಾಗ್ರಹಣ,  ಊಲಾಸ್  ಹೈದೂರ್  ಪ್ರೊಡಕ್ಷನ್ ಡಿಸೈನ್ ಮತ್ತು ಹೇಮಂತ್ ಕುಮಾರ್ ಡಿ ಸಂಕಲನವಿದೆ.
WhatsApp Group Join Now
Telegram Group Join Now
Share This Article