ಬೈಕ್ ಕಳ್ಳತನ: ಆರೋಪಿ ಬಂಧನ

Ravi Talawar
ಬೈಕ್ ಕಳ್ಳತನ: ಆರೋಪಿ ಬಂಧನ
WhatsApp Group Join Now
Telegram Group Join Now
ಬಳ್ಳಾರಿ: 22./ಜಿಲ್ಲೆಯ ನಾನಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 10.60 ಲಕ್ಷ ರೂ.ಬೆಲೆ ಬಾಳುವ 26  ಬೈಕ್ ಗಳನ್ನು ಬಳ್ಳಾರಿ ಬ್ರೂಸ್ ಪೇಟೆ ಪೋಲೀಸ್ ಠಾಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೂಸ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ.18 ರಂದು ಬೆಳಿಗ್ಗೆ ಸoಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ಕಾಳಿಪ್ರಸಾದ್ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವ ಕುರಿತು ಆರೋಪಿ ಒಪ್ಪಿಕೊಂಡಿದ್ದಾನೆ. ಬ್ರೂಸ್ ಪೇಟೆ ಪೋಲಿಸ್ ಠಾಣೆ, ಕೌಲ್ ಬಜಾರ್ ಪೊಲೀಸ್ ಠಾಣೆ, ತೋರಣಗಲ್ಲೂ ಪೋಲೀಸ್ ಠಾಣೆ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೋಲೀಸ್ ಠಾಣೆ, ಸೇರಿದಂತೆ ನೆರೆಯ ಆಂಧ್ರದ ಬೊಮ್ಮನಾಳ ಠಾಣೆ ವ್ಯಾಪ್ತಿಯಲ್ಲಿ  ಕಳ್ಳತನ ಮಾಡಿದ್ದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದು, 10.60 ಲಕ್ಷ ರೂ.ಬೈಕ್ ಗಳ ಮೌಲ್ಯ ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬ್ರೂಸ್ ಪೇಟೆ ಪೋಲೀಸ್ ಠಾಣೆ ಪಿಐ ಮಹಾಂತೇಶ್ ಟಿ., ಪಿಎಸ್ಐ ಶೇಹನಾಜ್ ಎಸ್.ಜೇ, ಎಎಸ್ ಐ ಮಲ್ಲಿಕಾರ್ಜುನ್, ಸಿಬ್ಬಂದಿಗಳಾದ ಶ್ರೀನಿವಾಸ್, ಶಿವರಾಜ್, ಉಮೇಶ್ ರೆಡ್ಡಿ, ರಾಮಂಜನಿ, ಶೇಖ್ ಜಿಲಾನ್, ದೊಡ್ಡ ಬಸವನಗೌಡ, ಅನಿಲ್, ಉಮಾಪತಿ ಇತರರಿದ್ದರು.
WhatsApp Group Join Now
Telegram Group Join Now
Share This Article