ಬಳ್ಳಾರಿ,ಮೇ 21 ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಪಡೆಯಲು ಇಚ್ಛಿಸುವ ಸ್ವಂತ ಮನೆ ಇಲ್ಲದೇ ಇರುವ ವಸತಿ ರಹಿತರಿಂದ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಪಿಎಂಎವೈ, ಹೆಚ್‌ಎಫ್‌ಎ ಹಾಗೂ ಇತರೆ ಯೋಜನೆಯಡಿ ಬಳ್ಳಾರಿ ನಗರದ ಮುಂಡರಗಿ ಆಶ್ರಯ ಬಡಾವಣೆಯಲ್ಲಿ ಜಿ+2 ಮಾದರಿಯ 5616 ಮನೆಗಳ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಫಲಾನುಭವಿಗಳಾಗಲು ವಸತಿ ರಹಿತರಾಗಿರಬೇಕು. ಬಳ್ಳಾರಿ ನಗರದ ನಿವಾಸಿಗಳಾಗಿರಬೇಕು. ವಾರ್ಷಿಕ ಆದಾಯ ರೂ.3 ಲಕ್ಷ ಮೀರಿರಬಾರದು. ಫಲಾನುಭವಿ ವಂತಿಕೆ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಬದ್ದರಾಗಿರಬೇಕು.
*ಫಲಾನುಭವಿಯು ಭರಿಸಬೇಕಾದ ವಂತಿಕೆ ಮೊತ್ತದ ವಿವರ: *
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ:
ಕೇAದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-3,30,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-42,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ.
ಅಲ್ಪ ಸಂಖ್ಯಾತ ಮತ್ತು ಇತರೆ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-2,70,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-1,02,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ. ಪಾವತಿಸಬೇಕು.
ಈ ಮೇಲ್ಕಂಡ ಅರ್ಹತೆಯ ಮಾನದಂಡ ಹಾಗೂ ಫಲಾನುಭವಿ ವಂತಿಕೆ ಪಾವತಿಸಲು ಶಕ್ತರಾಗಿರುವ ಹಾಗೂ ಆಸಕ್ತಿ ಹೊಂದಿರುವ ಕುಟುಂಬಗಳು ಕೂಡಲೇ ನಿಗಧಿತ ನಮೂನೆಯ ಅರ್ಜಿ ಪಡೆದು ಅವಶ್ಯಕ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಹಳೆಯ ಕಚೇರಿಯ ಆಶ್ರಯ ಶಾಖೆಗೆ ಭೇಟಿ ನೀಡಬಹುದು ಎಂದು ಮಹಾನಗರ ಪಾಲಿಕೆ ಕಚೇರಿಯು
ಬಳ್ಳಾರಿ ಮಹಾನಗರ ಪಾಲಿಕೆ: ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
