ನವದೆಹಲಿ: ನಿನ್ನೆ ಮಂಗಳವಾರ ಸಂಜೆ ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ನೈಋತ್ಯ ಮುಂಗಾರು ಆರಂಭವಾಗಲು ಅನುಕೂಲಕರ ವಾತಾವರಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಇದುವರೆಗೆ ಮಳೆ ಸಂಬಂಧಿತ ದುರ್ಘಟನೆಯಿಂದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 4.30 ಕ್ಕೆ ಬಿಡುಗಡೆಯಾದ ಮುನ್ಸೂಚನೆ ಬುಲೆಟಿನ್‌ನಲ್ಲಿ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಂದಿನ ಏಳು ದಿನಗಳಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಮೇ ಅಂತ್ಯದ ವೇಳೆಗೆ ಆಗಮಿಸುವ ನೈಋತ್ಯ ಮುಂಗಾರು, ನಿರೀಕ್ಷೆಗಿಂತ ಸುಮಾರು ಎರಡು ವಾರಗಳ ಮುಂಚಿತವಾಗಿ ಆಗಮಿಸಿದೆ. ನೈಋತ್ಯ ಮಾನ್ಸೂನ್ ಆರಂಭಕ್ಕೆ ಬಲವಾದ ಪಶ್ಚಿಮ ಗಾಳಿ ಮತ್ತು ಹೆಚ್ಚುತ್ತಿರುವ ಸಮುದ್ರ ಮೇಲ್ಮೈ ತಾಪಮಾನದಂತಹ ಹವಾಮಾನ ಅಂಶಗಳು ಕಾರಣವೆಂದು ತಜ್ಞರು TNIE ಗೆ ತಿಳಿಸಿದ್ದಾರೆ.