ಚಿಕ್ಕೋಡಿ : ಶಿರಗಾಂವ ಗ್ರಾಮ ಪಂಚಾತಿಯಲ್ಲಿಯ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ತನಿಖೆಗಾಗಿ ತಾಲೂಕಾ ಪಂಚಾಯತಿ ಕಚೇರಿಯ ಎದುರಿಗೆ ಕರವೇಯಿಂದ ಪ್ರತಿಭಟನೆ ತನಿಖೆಗೆ ಆಗ್ರಹಿಸಿದರು.
ಶಿರಗಾಂವ ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂದು ಕರವೇ ಶಿರಗಾಂವ ಘಟಕದ ಅಧ್ಯಕ್ಷರಾದ ಅನೀಲ ನಾವಿ ಇವರ ನೇತೃತ್ವದಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಯಿತು.
ಅನೀಲ ನಾವಿ ಮಾತನಾಡಿ, ಶಿರಗಾಂವ ಗ್ರಾಮ ಪಂಚಾಯತಿಯಲ್ಲಿ, ನರೇಗಾ ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ, ಮಸಿನರಿ- ಜೆಸಿಬಿ ಮೂಲಕ ಕಾಮಗಾರಿ ಮಾಡಿಸಿ, ಸುಳ್ಳು ಬಿಲ್ಲಗಳನ್ಬು ಸ್ರಷ್ಟಿಸಿ ಪಿಡಿಓ ಮತ್ತು ಅಧ್ಯಕ್ಷರು ಲೂಟಿ ಹೊಡೆದಿದ್ದಾರೆ, ಇದರ ಬಗ್ಗೆ ಈಗಾಗಲೇ ದೂರು ನೀಡಿದರೂ ಯಾವುದೇ ತರದ ಕ್ರಮ ಆಗಿಲ್ಲ ಎಂದು ಹೇಳಿದರು.
ಕರವೇ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಗ್ರಾಮ ಪಂಚಾಯತಿಗಳ ಹಗರಣಗಳ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲವಾದರೆ ಜಿಲ್ಲಾ ವ್ಯಾಪ್ತಿಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಗ್ರಾಮೀಣ ಭಾಗಗಳ ಅಭಿವೃದ್ಧಿ ಆಗಬೇಕು, ಮೂಲಭೂತಗಳ ಸೌಕರ್ಯಗಳು ಗ್ರಾಮೀಣ ಜನತೆಗೆ ಸಿಗಬೇಕು ಮತ್ತು ಕಾರ್ಮಿಕರಿಗೆ ಉದ್ಯೋಗ ಸಿಗಬೇಕು, ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟ್ಯಾಂತರ ಹಣವನ್ನು ಗ್ರಾಮ ಪಂಚಾಯತಿಗಳಿಗೆ ನೀಡುತ್ತಲಿದೆ. ಆದರೆ ಇದರ ಸದುಪಯೋಗ ಆಗದೇ ಉದ್ಯೋಗ ಖಾತ್ರಿ ಯೋಜನೆಯು, ಉದ್ಯೋಗ ಕತ್ರಿ ಯೋಜನೆಯಾಗಿ ಕಾರ್ಯ ಮಾಡುತ್ತಲಿದೆ, ಗ್ರಾಮ ಪಂಚಾಯತಿಗಳ ಕಡತಗಳನ್ನು ಮತ್ತು ಕಾಮಗಾರಿಗಳನ್ನು ಪರಿಶೀಲಿಸಿ, ಬ್ರಷ್ಟರ ವಿರುದ್ಧ ಕ್ರಮ ಆಗಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಕರವೇ ಉಪಾಧ್ಯಕ್ಷರಾದ ಸಂತೋಷ ಪೂಜೇರಿ, ಪ್ರತಾಪಗೌಡ ಪಾಟೀಲ, ಕಾರ್ಯಕರ್ತರಾದ ಯುವರಾಜ ಕಾಂಬಳೆ, ಮಾಳಪ್ಪಾ ಕರೆಣ್ಣವರ, ಸಂತೋಷ ತಳವಾರ, ರಮೇಶ ಡಂಗೇರ, ಸೌರಭ ಹಿರೇಮಠ, ಕಮಲ ತಹಶಿಲ್ದಾರ, ಆರ್ಮನ್ ಸಯ್ಯದ, ಶಿವರಾಜ ಮದಾಳೆ, ಸಚಿವ ದೊಡ್ಡಮನಿ, ಶಿವಾಜಿ ಖಾಡೆ, ಸಂತೋಷ ಕುರಣೆ, ಅಮೂಲ ನಾವಿ, ಕಪೀಲ ಕೋರಿ, ರುದ್ರಯ್ಯಾ ಹಿರೇಮಠ, ಉದಯ ಶಿಂಗೆ, ಅನೀಲ ಕಟ್ಟಿ, ದೀಪಕ ಸಾಳುಂಕೆ, ದುರದುಂಡಿ ಬಡಿಗೇರ, ರಾಘವೇಂದ್ರ ಕರೆಣ್ಣವರ, ದಶರಥ ಭೋಸಲೆ, ಯುವರಾಜ ಸಂಖೆ, ಸೂರಜ ತೋರಸೆ ಹಾಗೂ ನೂರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.