ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

Ravi Talawar
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
WhatsApp Group Join Now
Telegram Group Join Now
ಜಮಖಂಡಿ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಪಂ ನೌಕರರು ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಮಂಗಳವಾರ ಪ್ರತಿಭಟನೆ ನೆಡೆಸಿದರು. ಕರಡು ಅಧಿಸೂಚನೆಯಲ್ಲಿ ರೂ31000 ನಿಗದಿ ಪಡಿಸಿ ಅಂತಿಮಗೊಳಿಸಬೇಕು, ಪಿಂಚಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ , ಪಂಚಾಯಿತಿಗೊಂದು ಎಸ್‌ಡಿಎ ಎರಡನೇ ಡಿಇಓ ನೇಮಕಾತಿ, ಸ್ವಚ್ಛವಾಹಿನಿಯ ಒಡಂಬಡಿಕೆ ರದ್ದುಗೊಳಿಸಬೇಕು, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸ ನೀಡಬೇಕು, ರೂ.7500 ಗೌರವಧನ ನಿಗದಿ ಪಡಿಸಬೇಕು, ಸಿಂಗಲ್ ಚಾಲಕರನ್ನು ಪರಿಗಣಿಸಿ 15ಸಾವಿರ ಗೌರವ ಧನ ನೀಡಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ಸಿಐಟಿಯು ಹಾಗೂ ರಾಜ್ಯ ಗ್ರಾಪಂ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಾಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ಅವರಿಗ ಮನವಿ ಸಲ್ಲಿಸಿದರು. ಸಂಜೀವ ನಾಯಕ, ಬೀರಪ್ಪ ಮರನೂರ, ಬಸವರಾಜ ಮಾಚಕನೂರ, ಶಂಕರ ಕಲ್ಲಕಂಭ, ವಿಜಯ ಮುಧೋಳ, ಬಾಲಕೃಷ್ಣ , ದರೆಪ್ಪ ಕಂಬಾಗಿ, ಶ್ರೀಶೈಲ ಯಡಳ್ಳಿ, ಹಣಮಂತ ನಾವಿ, ನಿಂಗಪ್ಪ ಕುಲ್ಲೂಳ್ಳಿ, ದಯಾನಂದ, ಶ್ರೀಧರ ಸಪ್ತಸಾಗರ, ಮಾಧವ ವರದ, ಬಸವರಾಜ ಬಿರಾದಾರ, ಬಸವರಾಜ ಮೇಲಡ್ಡಿ, ಮಂಜು ಜನವಾಡ, ನಜೀರ, ಶಂಕ್ರಯ್ಯ ಹಿರೇಮಠ, ಮುಂತಾದವರಿದ್ದರು.
WhatsApp Group Join Now
Telegram Group Join Now
Share This Article