ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮತ್ತು ವಿಗ್ರಹ ಪ್ರತಿಷ್ಠಾಪನೆ 

Ravi Talawar
ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮತ್ತು ವಿಗ್ರಹ ಪ್ರತಿಷ್ಠಾಪನೆ 
WhatsApp Group Join Now
Telegram Group Join Now
 ಬಳ್ಳಾರಿ ಮೇ 20: ನಗರದ  ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣವಾಗಿ 12 ವರ್ಷವಾಗಿರುವ ಸುಸಂದರ್ಭದಲ್ಲಿ ಬೆಂಗಳೂರಿನ ಶ್ರೀ ವಾಸವಿ ಪೀಠ  ಸ್ವಾಮಿಗಳಾದ ಶ್ರೀ ಸಚಿದಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ  ಶ್ರೀರಂಗಪಟ್ಟಣ ದಿಂದ  ಬಂದ  30 ಸ್ವಾಮಿಗಳು ಕುಂಭಾಭಿಷೇಕ
  ಬಹಳ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು .
 ದಿನಾಂಕ ಮೇ 17ರಂದು  ಸಂಜೆ ಬೆಂಗಳೂರಿನ ಶ್ರೀ ಲಲಿತ ಕಲಾ ನಾಟ್ಯಕಲ್ಪ ಅಕಾಡೆಮಿ ಇವರಿಂದ ಅಯ್ಯಪ್ಪ ಸ್ವಾಮಿ ಚರಿತೆಯನ್ನು ನೃತ್ಯ ರೂಪದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿಪ್ರದರ್ಶಿಸಲಾಯಿತು.  ಮತ್ತು ಮೇ 18ರಂದು  ಸಂಜೆ ನಮ್ಮ ಬಳ್ಳಾರಿಯ ಗಾಯಕಿಯಾದ ಪ್ರಕೃತಿ ರೆಡ್ಡಿ ಇವರಿಂದ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮತ್ತು ಮೇ 19 ರಂದು  ಸೋಮವಾರ ದೇವಾಲಯದ ಪ್ರಾಂಗಣದಲ್ಲಿ ನವಗ್ರಹ ವಿಗ್ರಹಗಳ ಮತ್ತು ದೇವಿ ವಿಗ್ರಹ ಪ್ರತಿಷ್ಠಾಪನವನ್ನು ಮಾಡಲಾಯಿತು. ಇನ್ನುಮುಂದೆ ದೇವಾಲಯಕ್ಕೆ ಬರುವ ಭಕ್ತರಿಗೆಲ್ಲ ಒಂದೇ ಪ್ರಾಂಗಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ,. ಗಣಪತಿ,  ಕುಮಾರಸ್ವಾಮಿ ,ನವಗ್ರಹಗಳು ಮತ್ತು ದೇವಿಯ ದರ್ಶನವನ್ನು ಮಾಡಬಹುದಾಗಿದೆ.  ಮತ್ತು ಸಂಜೆ ಶ್ರೀ  ಅಯ್ಯಪ್ಪ ಸ್ವಾಮಿ ದೇವಾಲಯದ ಪಡಿ ಪೂಜೆಯನ್ನು ಶಬರಿಮಲೆ ಮೂಲ ಸ್ಥಾನ ಅರ್ಚಕರಾದ ಶ್ರೀ ಶ್ರೀರಂಗಂ ಶರಣ್ ಮೋಹನ್ ರವರಿಂದ ಶಬರಿಮಲೆಯಲ್ಲಿ ನಡೆಯುವ ರೀತಿಯಲ್ಲಿಯೇ ಮಾಡಲಾಯಿತು.  ಈ  ಕಾರ್ಯಕ್ರಮಕ್ಕೆ  ಕೇರಳದಿಂದ  ಚಂಡ  ವಾಧ್ಯ  ಕೂಡ ತರಿಸಲಾಯಿತು.ಹಾಗೆ 18 ವಿಧವಾದ ಪುಷ್ಪಗಳಿಂದ ವಿಶೇಷ ಪುಷ್ಪಾಭಿಷೇಕವನ್ನು ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ಬಹಳ ಸುಂದರವಾಗಿ ಭಕ್ತರ ಕಣ್ಣಿಗೆ ತೃಪ್ತಿಯಾಗುವ ರೀತಿಯಲ್ಲಿ ಮಾಡಲಾಯಿತು. ಈ ಮೂರು ದಿನದ ಕಾರ್ಯಕ್ರಮಗಳಿಗೆ ಬಂದ ಭಕ್ತರಿಗೆಲ್ಲ ದೇವರ ಪ್ರಸಾದವನ್ನು ಏರ್ಪಡಿಸಲಾಯಿತು ಎಂದು ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ನ ಚೆರ್ಮನ್ ರಾದ  ಜಯಪ್ರಕಾಶ್ ಜೆ.ಗುಪ್ತ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ  ಜಿ. ಸೋಮಶೇಖರ್ ರೆಡ್ಡಿ ರವರು, ಬುಡಾ ಚೇರ್ಮನ್ ಶ್ರೀ ಆಂಜನೇಯಲು,ಬುಡಾ ಮಾಜಿ ಚೇರ್ಮನ್ ರಾದ ಮಾರುತಿ ಪ್ರಸಾದ್ ಮತ್ತು ನಗರದ ಪಾಲಿಕೆ ಸದಸ್ಯರಾದ ಮುಂಡ್ಲುರ್ ಅನೂಪ್ ಕುಮಾರ್, ರಾಯದುರ್ಗ  ಮಾಜಿ  ಶಾಸಕರಾದ  ಕಾಪು ರಾಮಚಂದ್ರ ರೆಡ್ಡಿ ಮತ್ತು ನಗರದ ಪಾಲಿಕಿಯ ಸದಸ್ಯರು  ಹಾಗೂ ನಗರದ ಅನೇಕ ಗಣ್ಯರು, ಅಯ್ಯಪ್ಪ ಸ್ವಾಮಿಯ ಭಕ್ತರು ಹಾಗೂ ಬಳ್ಳಾರಿಯ ಗಡಿ ಭಾಗ, ಬೇರೆ ಊರುಗಳಿಂದ  ಬಂದ ಅಯ್ಯಪ್ಪ ಭಕ್ತರು, ಈ ಮೂರು ದಿನ ಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
WhatsApp Group Join Now
Telegram Group Join Now
Share This Article