ಚದುರಂಗದಾಟ ಏಕಾಗ್ರತೆಯನ್ನು ಬೆಳೆಸುತ್ತದೆ : ಚೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ 

Ravi Talawar
ಚದುರಂಗದಾಟ ಏಕಾಗ್ರತೆಯನ್ನು ಬೆಳೆಸುತ್ತದೆ : ಚೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ 
WhatsApp Group Join Now
Telegram Group Join Now
 ಬಳ್ಳಾರಿ ಮೇ 20. : ಚೆಸ್ ಆಟ ಮಕ್ಕಳಲ್ಲಿ ಏಕಾಗ್ರತೆ ಏಕಾಗ್ರತೆ ಉಂಟುಮಾಡುತ್ತದೆ  ಈ ಆಟದಲ್ಲಿ ಪರಿಣಿತರಾದ ಮಕ್ಕಳು ಯಾವುದೇ ಸಂದರ್ಭದಲ್ಲಿ ವಿಚಲಿತರಾಗುವುದಿಲ್ಲ, ಮತ್ತು ಈ ಚದುರಂಗದಾಟವನ್ನು ಸಮಾಜದಲ್ಲಿ ಮೈಂಡ್ ಗೇಮ್ ಎಂದು ಉಲ್ಲೇಖಿಸಲಾಗುತ್ತದೆ  ಎದ್ದು ಚೆಸ್ ಅಸೋಸಿಯೇಷನ್ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಬಿ ಹೆಚ್ ಎಂ ವಿರೂಪಾಕ್ಷಯ್ಯ ತಿಳಿಸಿದರು.
 ಅವರಿಂದು ನಗರದ ಪೋಲಾ ಹೋಟೆಲ್ ನಲ್ಲಿ 13 ವರ್ಷ ಮೇಲ್ಪಟ್ಟು ಮತ್ತು 19 ವರ್ಷ ಒಳಗಿನ ಮಕ್ಕಳಿಗೆ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಚೆಸ್ ಪಂದ್ಯಾವಳಿ ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕವಾದ ಪರಿಣಾಮವನ್ನು ಉಂಟು ಮಾಡುವುದರಿಂದ ಈ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕೆಂದರು.
 ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಪೋಲಾ ಪ್ರವೀಣ್, ಚೆಸ್ ಅಸೋಸಿಯೇಷನ್ ಯಾವಾಗಲಾದರೂ ಯಾವುದೇ ಸಹಾಯವನ್ನು ಕೇಳಿಕೊಂಡು ಬಂದಲ್ಲಿ ನಾನು ತನು-ಮನದೊಂದಿಗೆ ಸಹಾಯ ಮತ್ತು ಸಹಕಾರ ಮಾಡಲು ಸಿದ್ಧನಿದ್ದೇನೆ ನಮ್ಮ ನಗರದ ಚೆಸ್ ಆಟಗಾರ ಮಕ್ಕಳು ರಾಜ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂದು ಆಶಿಸಿದರು.
 ಈ ಪಂದ್ಯಾವಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಸೋಸಿಯೇಷನ್ ಆರ್ಬಿಟ್ರೇಟರ್ ಕೋರಿ ಜಗದೀಶ್, ಬಸವರಾಜ್, ಪ್ರಕಾಶ್ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article