ರಾಜ್ಯ ಕರ್ನಾಟಕ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಅಪ್ಪಾಸಾಬ ಘಟಕಾಂಬಳೆ ಆಯ್ಕೆ

Ravi Talawar
ರಾಜ್ಯ ಕರ್ನಾಟಕ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಅಪ್ಪಾಸಾಬ ಘಟಕಾಂಬಳೆ ಆಯ್ಕೆ
WhatsApp Group Join Now
Telegram Group Join Now

ಅಥಣಿ: ರಾಜ್ಯ ಕರ್ನಾಟಕ ಛಲವಾದಿ ಮಹಾಸಭಾ ಬೆಳಗಾವಿ ಜಿಲ್ಲಾ ಆಧ್ಯಕ್ಷ ಮಲ್ಲಿಕಾರ್ಜುನ ಜಯರಾಮ ರಾಶಿಂಗೆ ಅವರು ಜಿಲ್ಲೆಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಅಥಣಿ ತಾಲೂಕಿನ ಅಧ್ಯಕ್ಷರನ್ನಾಗಿ ದಲಿತ ಮುಖಂಡ ಅಪ್ಪಾಸಾಬ ಘಟಕಾಂಬಳೆ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಿದರು.

ಅಥಣಿ ಪಟ್ಟಣದ ಡಾ ಬಾಬಾಸಾಹೇಬ ಅಂಬೇಡಕರ ಅವರ ಉದ್ಯಾನವನದಲ್ಲಿ ಭಾನುವಾರ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ರಾಶಿಂಗೆ ಅವರ ಸಮ್ಮುಖದಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ನೇಮಕಾತಿ ಪತ್ರ ವಿತರಣೆ ನೇರವೇರಿಸಿ ಮಾತನಾಡಿದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಮಹಾಸಭಾ ಸೂಚನೆ ಹಾಗೂ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ಸಮಾಜದ ಸಬಲೀಕರಣದಲ್ಲಿ  ತಮ್ಮನ್ನು ತೊಡಗಿಸಿಕೊಂಡು ಸಮಾಜದ ಸಂಘಟನೆಗೆ ಶ್ರಮಿಸಬೇಕೆಂದು ಹೇಳಿದರು

ಈ ವೇಳೆ ದಲಿತ ಮುಖಂಡರಾದ ಸಿದ್ದಾರ್ಥ ಸಿಂಗೆ, ರಾಕೇಶ ಪಟ್ಟಣ, ಅವೀನಾಶ ಸಿಂಧೆ, ವಿಜಯ ಬಡಚಿ, ಕುಮಾರ ಕಾಂಬಳೆ, ಅಮೀತ ಕಾಂಬಳೆ, ನಾಗರಾಜ ಕಾಂಬಳೆ ಸೇರಿದಂತೆ ಛಲವಾದಿ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article