ಚೆನ್ನೈ: 95 ವರ್ಷದ ಅವರು ತಮಿಳುನಾಡಿನ ಉದಕಮಂಡಲದಲ್ಲಿ ಅಂತಿಮ ದಿನಗಳನ್ನು ಕಳೆಯುತ್ತಿದ್ದ ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸನ್ ಇಂದು ನಿಧನರಾಗಿದ್ದಾರೆ. 1955ರಲ್ಲಿ ಪರಮಾಣು ಇಂಧನ ಇಲಾಖೆ ಸೇರಿದ ಅವರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಅನೇಕ ಪರಮಾಣು ಇಂಧನ ಯೋಜನೆಗಳಲ್ಲಿ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದಾರೆ.
1959ರಲ್ಲಿ ದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರಧಾನ ಯೋಜನಾ ಎಂಜಿನಿಯರ್ ಆಗಿ ಇವರನ್ನು ನೇಮಿಸಲಾಯಿತು. 1967 ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯ ಯೋಜನಾ ಎಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡರು. ಇಲ್ಲಿ ಅನೇಕ ಸ್ವಾವಲಂಬಿ ಪರಮಾಣು ವಿದ್ಯುತ್ ಸಾಮರ್ಥ್ಯ ರೂಪಿಸಲು ಇವರು ಸಹಾಯ ಮಾಡಿದರು.
ಪರಮಾಣು ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ ಇವರ ಕೊಡುಗೆ ಅಪಾರವಾಗಿದೆ. ಭಾರತದ ಎರಡನೇ ಅತ್ಯುತ್ತಮ ನಾಗರಿಕ ಪ್ರಶಸ್ತ್ರಿ ಪದ್ಮ ವಿಭೂಷಣಕ್ಕೆ ಭಾಜನರಾಗಿರುವ ಶ್ರೀನಿವಾಸನ್ ಅವರ ದೂರದೃಷ್ಟಿಯ ನಾಯಕತ್ವ, ತಾಂತ್ರಿಕ ನೈಪುಣ್ಯತೆ ಮತ್ತು ದೇಶಕ್ಕೆ ಅವಿರಹಿತ ಸೇವೆಯು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನವಾಗಲಿದೆ.