ಬಳ್ಳಾರಿ,ಮೇ 19: ನಗರದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 21 ರಂದು ಬೆಳಿಗ್ಗೆ 09 ಗಂಟೆಗೆ ಅಪ್ರೆಂಟೀಸ್ ತರಬೇತಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರಾದ ಪಂಡಿತಾರಾಧ್ಯ ಕೆ.ಹೆಚ್.ಎಮ್ ಅವರು ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಟೊಯೋಟ, ಕಿರ್ಲೋಸ್ಕರ್, ಹೋಂಡ ಮೋಟಾರ್ ಸೈಕಲ್ ಕಂಪನಿಯಲ್ಲಿ ಅಪ್ರೆಂಟೀಸ್ ತರಬೇತಿ ಆಯ್ಕೆಗಾಗಿ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ನಡೆಸಲಾಗುವುದು.
ಬೇಕಾದ ದಾಖಲೆಗಳು: 18 ವರ್ಷ ಪೂರೈಸಿರಬೇಕು. ಆಧಾರ್ ಕಾರ್ಡ್ನ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐ.ಟಿ.ಐ ಅಂಕಪಟ್ಟಿ, ಎರಡು ಭಾವಚಿತ್ರ ಹಾಗೂ ಸ್ವ-ವಿವರದ ಪ್ರತಿ. ಫಿಟ್ಟರ್, ಟರ್ನರ್, ಎಲೆಕ್ಟಿçಷಿಯನ್, ವೆಲ್ಡರ್, ಇ.ಎಂ., ಎಂ.ಎA.ವಿ., ಮೆಕ್ಯಾನಿಕ್ ಡೀಸೆಲ್ ವೃತ್ತಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಐ.ಟಿ.ಐ ಪಾಸಾದ ಆಸಕ್ತಿಯುಳ್ಳ ಅಭ್ಯರ್ಥಿಗಳು ಹಾಜರಾಗಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.