ಮಂಗಳಮುಖಿಯರಿಗೆ ಉಡಿ  ತುಂಬಿರುವುದು ನಂಜುಂಡಸ್ವಾಮಿಯವರ ಸಮಾ ಸಮಾಜದ ಚಿಂತನೆಯಾಗಿದೆ  : ಉಜ್ಜಯಿನಿ ಶ್ರೀ

Ravi Talawar
ಮಂಗಳಮುಖಿಯರಿಗೆ ಉಡಿ  ತುಂಬಿರುವುದು ನಂಜುಂಡಸ್ವಾಮಿಯವರ ಸಮಾ ಸಮಾಜದ ಚಿಂತನೆಯಾಗಿದೆ  : ಉಜ್ಜಯಿನಿ ಶ್ರೀ
WhatsApp Group Join Now
Telegram Group Join Now
 ಬಳ್ಳಾರಿ ಮೇ 18 : ಸಮಾಜದಲ್ಲಿ ಮಂಗಳಮುಖಿಯರನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತದೆ,  ಅವರದಲ್ಲದ ತಪ್ಪಿಗೆ ಮಂಗಳಮುಖಿಯರು ಸಮಾಜದಲ್ಲಿ ಅವಮಾನ ಅಪಮಾನಗಳನ್ನು ಅನುಭವಿಸುತ್ತಿದ್ದಾರೆ ಅಂಥವರನ್ನು ಗುರುತಿಸಿ ಇಂದು ಅವರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿರುವುದು ಸದ್ಧರ್ಮ ಶಿರೋಮಣಿ ನಂಜುಂಡೇಶ್ವರ ತಾತನವರ ಸಮ ಸಮಾಜ ನಿರ್ಮಾಣದ ಅತ್ಯಂತ ಉನ್ನತವಾದ ಚಿಂತನೆಯಾಗಿದೆ ಎಂದು ನಂಜುಂಡಸ್ವಾಮಿಯವರ ನಡೆಯನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನದೀಶ್ವರ ಶ್ರೀ ಶ್ರೀ ಸಾವಿರದ ಎಂಟು ಜಗದ್ಗುರು ಅಭಿನವ ಸಿದ್ದಲಿಂಗ ರಾಜ ದೇಶ ಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು   ಶ್ಲಾಘಿಸಿದರು.
 ಅವರು ಇಂದು ತಾಲೂಕಿನ ಮೋಕ ಹೋಬಳಿಯ ನಾಗನಹಳ್ಳಿಯ  ಶ್ರೀಮದ್ ಉಜ್ಜಯಿನಿ ಖಾಸ ಶಾಖ ಮಠ ಶ್ರೀ ಗುರು ಮರುಳು ಸಿದ್ದಾಶ್ರಮ ಮಠ ಹಾಗೂ ಶ್ರೀ ನಂಜುಂಡೇಶ್ವರ ಜನಸೇವಾ ಕಲ್ಯಾಣ ಟ್ರಸ್ಟ್ ರಿಜಿಸ್ಟರ್ ವತಿಯಿಂದ ತಿಪ್ಪೇಸ್ವಾಮಿ ತಾತನವರ ಏಳನೇ ವರ್ಷದ ಪುಣ್ಯ ಸ್ಮರಣೋತ್ಸವ, ಮಠದ ರಜೆಯೋತ್ಸವ ಹಾಗೂ ಉಚಿತ ಸಾಮೂಹಿಕ ಮದುವೆ ಉಡಿತುಂಬುವ ಕಾರ್ಯಕ್ರಮ ಸೇರಿದಂತೆ  ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಎರಡನೇ ದಿನದ  ಕಾರ್ಯಕ್ರಮದಲ್ಲಿ ಇಂದು ನಡೆದ   ಸಾಮೂಹಿಕ ವಿವಾಹ
ಕಾರ್ಯಕ್ರಮದಲ್ಲಿ ಪ್ರವಚನವನ್ನು ನೀಡಿ ಮಾತನಾಡಿ, ಸಮಾಜದಲ್ಲಿ ಮಂಗಳಮುಖಿಯರಿಗೆ ಯಾವುದೇ ಸ್ಥಾನಮಾನಗಳಿಂದ ಇತ್ತೀಚೆಗೆ ಅವರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ, ಸಮಾಜ ಅವರನ್ನು ಇಂದಿಗೂ  ಅಸಡ್ಡೆಯಿಂದಲೆ ಕಾಣುತ್ತಿದೆ ಇಂಥ ಸಂದರ್ಭದಲ್ಲಿ ನಂಜುಂಡಸ್ವಾಮಿಯವರು ಅವರನ್ನು ಗುರುತಿಸಿ ಉಡಿ ತುಂಬಿ ಗೌರವಿಸಿರುವುದು ನಂಜುಂಡಸ್ವಾಮಿಯವರ ಅತ್ಯಂತ ಉನ್ನತ ಚಿಂತನೆಯಾಗಿದೆ ಎಂದರು.
 ಮಠದ ಯಾವುದೇ ಭಕ್ತನು ಗುರುಗಳಿಗೆ ಸೇವೆ ಮಾಡುವುದು ಮತ್ತು ಅವರ ಕೃಪೆಗೆ ಪಾತ್ರರಾಗುವುದು ಸಾಮಾನ್ಯ, ಆದರೆ ಅತ್ಯಂತ ಪರಿಪೂರ್ಣತೆಂದರೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಸುವುದಾಗಿದೆ ಇದರಿಂದ ಪ್ರತಿ ಅಂಗಾಂಗ ಮತ್ತು ಶರೀರದ ಎಲ್ಲ ನರನಾಡಿಗಳಿಗೂ ಸ್ವಾಮಿಯ ಭೌತಿಕ ಸ್ಪರ್ಶ ಉಂಟಾಗಿ ಅವನ ಜೀವನ ಪಾವನವಾಗಲಿದೆ ಎಂದರು.
 ಮಠಗಳಲ್ಲಿ ಯಾವುದೇ ಭಕ್ತನು ಜಾತಿಭೇದಭಾವ ಜನಾಂಗ ಧರ್ಮ ಎಂದು ನೋಡದೆ  ಕೇವಲ ಭಕ್ತನಾಗಿ ಮಾತ್ರ ಬರಬೇಕು ಯಾವುದೇ ಕಾರಣಕ್ಕೂ ಮಠಗಳಲ್ಲಿ ಮೇಲು-ಕೀಳು ಎಂಬುದು ಇರಬಾರದು ಹಾಗಿದ್ದಾಗ ಮಾತ್ರ ಭಕ್ತರಲ್ಲಿ ಸಮಾನತೆ ಮತ್ತು ಸಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
 ಶ್ರೀ ಮಠದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮದ್ ಕಾಶಿ ಜಗದ್ಗುರುಗಳವರ ಮತ್ತು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ  ಅಡ್ಡ ಪಲ್ಲಕ್ಕಿ ಮಹೋತ್ಸವ ಸಾಮೂಹಿಕ ವಿವಾಹಗಳು ಹಾಗೂ ವಿಶೇಷವಾಗಿ 51 ಮಹಾ ಮಂಗಳಮುಖಿಯರಿಗೆ ಉಡಿ ತುಂಬುವ  ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಂಗಮರ ಹೊಸಳ್ಳಿ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ತುಮಕೂರಿನ ರಂಭಾಪುರಿ ಶಾಖ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳ ಬೋಳೋಡಿ ಬಸವೇಶ್ವರ ಬೂಹನಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಗಡ್ಡೆ ಗ್ರಾಮದ ಕೊಟ್ಟೂರು ಶಾಖ ವೃತ್ತ ಮಟ್ಟದ ಮರಿ ಕೊಟ್ಟೂರು ದೇಶಕರು, ಕ್ಯಾದಿಗೆ ಹಾಳು ಮಾಡಿದ ಗಂಗಾಧರಾಯ ತಾತನವರು ಬೆಣಕಲ್ಲಿನ ನಾಗಲಿಂಗಯ್ಯ ತಾತನವರು ಉಪಸ್ಥಿತರಿದ್ದರು.
 ಉಜ್ಜಯಿನಿ ಕಾಸಮಠ ಗುರು ಮರುಳ ಸಿದ್ದಾಶ್ರಮ ನಾಗೇನಹಳ್ಳಿ ಇದರ ಮರಿ ಸ್ವಾಮಿಗಳಾದ ಚಾಮರಾಜಸ್ವಾಮಿ ಶರಣಬಸವ ತಾತನವರು, ರವಿ ಸ್ವಾಮಿಗಳು ಶ್ರೀ ಕುಮಾರಸ್ವಾಮಿಗಳು ಇಂದು ಮಠದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ನಡೆಸಿಕೊಟ್ಟರು. ಇದಕ್ಕೂ ಮುನ್ನ ನಾಗೇನಹಳ್ಳಿ ಗ್ರಾಮದಿಂದ  ಉಜ್ಜಯಿನಿ ಜಗದ್ಗುರುಗಳನ್ನು ಹಾಗೂ ಕಾಶಿ ಜಗದ್ಗುರುಗಳನ್ನು ಅಡ್ಡ ಪಲ್ಲಕ್ಕಿಯನ್ನು ವಿವಿಧ ಜನಪದ ಕಲಾತಂಡಗಳು ಹಾಗೂ ಬಜನಾ ತಾಳಮೇಳಗಳು ಜೊತೆಗೆ ನೂರಾರು ಮುತ್ತೈದೆಯರು ಹೊತ್ತುಕೊಂಡು  ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಮಠದ ನಂಜುಂಡೇಶ್ವರ ಸ್ವಾಮಿಗಳು ನೇರದ ಭಕ್ತರಿಗೆ ಆಶೀರ್ವಾದ ನೀಡಿದರು.
WhatsApp Group Join Now
Telegram Group Join Now
Share This Article