ಬಳ್ಳಾರಿ: 19.ಕಳೆದ ಸುಮಾರು ವರ್ಷಗಳಿಂದ ಟಿ.ವಿ.9 ವಾಹಿನಿಯಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ್ ಚಿನಗುಂಡಿ(30) ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರಿಗೆ ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ ಸೇರಿದಂತೆ 8 ತಿಂಗಳ ಮಗನಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆಉಂಟಾಗಿತ್ತು. ಕೂಡಲೇ ಅವರನ್ನು ವಿಜಯಪುರದ ಬಿ.ಎಲ್.ಡಿ.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರ ಆತ್ಮಕ್ಕೆ ದೇವರು, ಶಾಂತಿ ನೆಮ್ಮದಿ, ನೀಡಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರ್, ರಾಜ್ಯ ಪದಾಧಿಕಾರಿಗಳಾದ ಲೋಕೇಶ್ ಜಿ, ಭವಾನಿ ಸಿಂಗ್, ಕೃಷಿ ಸಚಿವರ ಆಪ್ತ ಸಹಾಯಕ ಬಸವರಾಜ್, ಪತ್ರಕರ್ತರಾದ ಎಂ. ಜಂಬುನಾಥ್, ವೆಂಕಟೇಶ್ ದೇಸಾಯಿ, ರಘುರಾಮ್ ಪೆಂಡ್ಕಕೂರು, ವಲಿಭಾಷಾ, ರವಿ ಕುಮಾರ್, ಬಜಾರಪ್ಪ, ವಿನಾಯಕ, ಗುರುಶಾಂತ್ ಸೇರಿದಂತೆ ಇಡಿ ಬಳ್ಳಾರಿ ಮಾಧ್ಯಮ ಬಳಗದವರು, ಪ್ರಾರ್ಥಿಸಿದ್ದಾರೆ.