ಇಸ್ಲಮಾಬಾದ್, ಮೇ 16:ಪಾಕಿಸ್ತಾನದ ಮಾಜಿ ಸಂಸದೆ ಶಾಂತನಾ ಗುಲ್ಜಾರ್ ಖಾನ್ ಟಿವಿ ಲೈವ್ ಸಂದರ್ಶನದಲ್ಲಿ ಪಾಕಿಸ್ತಾನದ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಶೇ. 82ರಷ್ಟು ಅತ್ಯಾಚಾರಕ್ಕೊಳಗಾದ ಮಹಿಳೆಯರು ತಮ್ಮ ತಂದೆ ಮತ್ತು ಸಹೋದರರಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದವರು ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಧರ್ಮದವರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಿದೆ, ಅಲ್ಲಿ ಸೇನಾ ಮುಖ್ಯಸ್ಥನ ಮುಂದೆ ಪ್ರಧಾನಿ ಹುದ್ದೆಯೂ ನಾಮ್ಕಾವಸ್ಥೆ ಎಂಬುದೆಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.
ಇದು ಪಾಕಿಸ್ತಾನ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ಎಸಗುವ ಕುಟುಂಬದ ಸದಸ್ಯರಲ್ಲಿ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪಂದಿರು ಕೂಡ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಮಹಿಳೆಯರ ಮೇಲೆ ಅವರದೇ ರಕ್ತಸಂಬಂಧ ಹೊಂದಿರುವ ಅಪ್ಪ, ಅಣ್ಣ, ಅಜ್ಜ, ಚಿಕ್ಕಪ್ಪಂದಿರು ಅತ್ಯಾಚಾರ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ರಾಷ್ಟ್ರೀಯ ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಅಲ್ಲಿನ ಮಾಜಿ ಸಂಸದೆಯೇ ಬಯಲು ಮಾಡಿದ್ದಾರೆ.