ಅಥಣಿ:ಮೇ15:ಸರ್ಕಾರಿಸಾರ್ವಜನಿಕಆಸ್ಪತ್ರೆಯ ಸಭಾ ಭವನದಲ್ಲಿ ನಡೆದ ಬಿಸಿಜಿ ಲಸಿಕಾ ಅಭಿಯಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು. ಇದೆ ವೇಳೆ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದ ಫಲಾನುಭವಿಗಳಿಗೆ ಶಾಸಕ ಲಕ್ಷ್ಮಣ ಸವದಿ ಅವರು ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಪ್ರತಿಯೊಬ್ಬ ಫಲಾನುಭವಿಗೆ ಉಚಿತ ಕನ್ನಡ ವಿತರಿಸಿದರು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು ಸರ್ಕಾರ ಈಗಾಗಲೇ ಕ್ಷಯ ರೋಗ ಮುಕ್ತವನ್ನಾಗಿಸಲು ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನೂ ಹಾಕಿಕೊಂಡಿದೆ. – ರಾಜ್ಯವನ್ನು ಕ್ಷಯ ರೋಗ ಮುಕ್ತವನ್ನಾಗಿಸುವದೆ ಈ ಅಭಿಯಾನದ ಉದ್ದೇಶವಾಗಿದೆ. ಬಿಸಿಜಿ ಲಸಿಕೆ ೨ ಕ್ಷಯ ರೋಗದ ವಿರುದ್ಧ ಹೋರಾಡಲು ವಿಶ್ವಾಸಾರ್ಹ – ಲಸಿಕೆ ಯಾಗಿದೆ ಕ್ಷಯ ರೋಗದ ಲಕ್ಷಣ ಕಂಡು ಬಂದಲ್ಲಿ ಆದಷ್ಟು ಬೇಗ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ – ವೈದ್ಯರಿಗೆ ಸಂಪರ್ಕಿಸಿ ಲಸಿಕೆ ಪಡೆದು ಕೊಳ್ಳಬೇಕೆಂದು – ತಿಳಿಸಿದರು.
ನಂತರ ತಾಲ್ಲೂಕ ವೈದ್ಯಾಧಿಕಾರಿ ಬಾಸಗೌಡ ಕಾಗೆ ಮಾತನಾಡಿ ಕ್ಷಯ ರೋಗದ ಕುರಿತು ಮಾಹಿತಿ ನೀಡಿದರು.ಹಾಗೂ ಯಾರು ಬಿಸಿಜಿ ಲಸಿಕೆ ಹಾಕಿ ಕೊಳ್ಳಬೇಕೆಂಬುದನ್ನು ವಿವರಿಸಿದರು. ಸಕ್ರಿಯ ಕ್ಷಯರೋಗಿಗಳ ನಿಕಟ ಸಂಪರ್ಕಿತರು. ದೇಹ ಗಾತ್ರದ ಸೂಚ್ಯಾಂಕ 18 ಕ್ಕಿಂತ ಕಡಿಮೆ ಇರುವವರು. ಮಧುಮೇಹಿಗಳು. ಧೂಮಪಾನಿಗಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರು ಬಿಸಿಜಿ ಲಸಿಕೆ ಪಡೆಯಬಹುದಾಗಿದೆ ಎಂದರು.
ಈ ವೇಳೆ ತಾಲ್ಲೂಕ ವೈದ್ಯ ಅಧಿಕಾರಿ
ಡಾ” ಬಸಗೌಡಾ ಕಾಗೆ ,ಸಿ ಎಸ್ ಪಾಟೀಲ,ಸಂಜಿವ ಗುಂಜಿಗಾಂವಿ,ಗುರುಸಿದ್ದಪ್ಪಾ ಮರಿಎಲಪ್ಪನ್ನವರ,ರರಮೇಶ ಹುಲಕುಂದ,ಚಿದಾನಂದ ಮೇತ್ರಿ,ಮುರಗೇಶ ಅವಟಿ,ರಾಮಗೌಡಾ ಪಾಟೀಲ,ಪ್ರಕಾಶ ನರೋಟ್ಟಿ,ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು