ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ 2024ನೇ ಸಾಲಿನ 75ನೇ ವಾರ್ಷಿಕ ಘಟಿಕೋತ್ಸವಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಂತರ್ಜಾಲ www.kud.ac.in ತಾಣದಲ್ಲಿ ಲಿಂಕ್ ಮೂಲಕ ಆಹ್ವಾನಿಸಲಾಗಿತ್ತು.
ಆದರೆ ಕೆಲವು ಅನಾಮದೇಯ ವ್ಯಕ್ತಿಗಳು ಕರ್ನಾಟಕ ವಿಶ್ವವಿದ್ಯಾಲಯದ ವೆಬ್ಸೈಟ್ ನಕಲು ಮಾಡಿ ವಿದ್ಯಾರ್ಥಿಗಳಿಂದ ಶುಲ್ಕದ ಮೊತ್ತವನ್ನು ತಮ್ಮ ಖಾತೆಗೆ ಭರಿಸಿಕೊಳ್ಳುತ್ತಿರುವ ವಿಷಯವು ವಿಶ್ವವಿದ್ಯಾಲಯದ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ವಿದ್ಯಾರ್ಥಿಗಳು ಘಟಿಕೋತ್ಸವದ ಶುಲ್ಕಗಳನ್ನು 2024 ಕ್ಕಿಂತ ಮುಂಚೆ ಉತ್ತೀರ್ಣರಾದ ಪದವಿಧರರು ಕರ್ನಾಟಕ ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ www.kud.ac.in ದಲ್ಲಿ ಲಭ್ಯವಿರುವ SBI portal ಮುಖಾಂತರ ಮಾತ್ರ ಭರಿಸತಕ್ಕದ್ದು, ಹಾಗೂ 2024ರ ನಂತರ ಉತ್ತೀರ್ಣರಾದ ಪದವಿಧರರು UUCMS ತಂತ್ರಾಂಶದ ಮುಖಾಂತರ ಮಾತ್ರ ಶುಲ್ಕ ಭರಿಸಲು ತಿಳಿಸಲಾಗಿದೆ. ಅನ್ಯ ಮಾರ್ಗದಲ್ಲಿ ಶುಲ್ಕ ಭರಿಸಿದಲ್ಲಿ ವಿಶ್ವವಿದ್ಯಾಲಯವು ಹೊಣೆಯಾಗಿರುವುದಿಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.