ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಕರಾಟೆ ಪಟುಗಳಿಗೆ ಮಲೇಷಿಯಾ ದಲ್ಲಿ 9 ರಿಂದ 11ನೇ ಮೇ ರವರೆಗೆ ನಡೆದ 21 ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪದಕ ಪ್ರಶಸ್ತಿ ವಿಜೇತರಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು ನಂತರ ಮಾತಾನಾಡಿದ ಸಹಾಯಕ ನಿರ್ದೇಶಕರಾದ ಶ್ರೀ ಮತಿ ಗ್ರೇಸಿ ರವರು ಮಾತಾನಾಡಿ ಕರಾಟೆ ಕ್ರೀಡೆಯು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಹೊಂದಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ವಿಶ್ವ ವಿದ್ಯಾಲಯ ಮಟ್ಟದಲ್ಲಿ ತರಬೇತಿ ಮತ್ತು ಪಂದ್ಯಾವಳಿಗಳು ಆಯೋಜನೆ ಆಗುತ್ತಿವೇ ಅದರಲ್ಲಿ ನಮ್ಮ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕರಾಟೆ ಪಟುಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ವನ್ನು ಪ್ರತಿನಿಧಿಸಿ ಪದಕ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಶ್ಲಾಘನೀಯ ನಮ್ಮ. ಕ್ರೀಡಾ ಇಲಾಖೆ ವತಿಯಿಂದ ಇಂದು ಈ ವಿಜೇತರಿಗೆ ಸನ್ಮಾನಿಸಿದ್ದು ನಿಜಕ್ಕೂ ಸಂತೋಷದ ತಂದಿದೆ ಈ ಕರಾಟೆ ತರಬೇತುದಾರರಾದ ಕಟ್ಟೇಸ್ವಾಮಿ ರವರನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೆನೆ ಎಂದರು
ತಂಡದ ತರಬೇತುದಾರರಾದ ಕಟ್ಟೇಸ್ವಾಮಿ ಮಾತನಾಡಿ ಮಲೇಷಿಯಾ ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಲೇಷಿಯಾ ಸೇರಿದಂತೆ ಭಾರತ, ಹಾಂಗ್ ಕಾಂಗ್, ಸಿಂಗಪೂರ, ಬಾಂಗ್ಲಾದೇಶ, ಉಜಬೆಕಿಸ್ಥಾನ್ . ನೇಪಾಳ, ಶ್ರೀಲಂಕಾ ಇಂಡೋನೇಷ್ಯಾ, ರಷ್ಯಾ, ಕಜಿಕಿಸ್ಥಾನ್, ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿದ್ದರು ಅದರಲ್ಲಿ ನಮ್ಮ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಪಡೆಇದ್ದಾರೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಹಕರಿಸಿ ನಮ್ಮ ಅಕಾಡೆಮಿಯ ತರಬೇತುದಾರರು ಪೋಷಕರು ಕ್ರೀಡಾ ಪ್ರೇಮಿಗಳಿಗೆ ಧನ್ಯವಾದಗಳು ತಿಳಿಸಿದರು
ಪ್ರಶಸ್ತಿಗಳನ್ನು ಪಡೆದ ಎಲ್ಲಾ ಕರಾಟೆ ಪಟುಗಳಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮತಿ ಕೆ ಗ್ರೇಸಿ ರವರು ಮತ್ತು ಸಿಬ್ಬಂದಿ ಮತ್ತು ಬಳ್ಳಾರಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ವಿಜಯ್ ಮಹಂತೇಶ್, ಬಳ್ಳಾರಿಯ ಬಿ ಐ ಟಿ ಎಮ್ ಕಾಲೇಜು ನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಶೋಕ, ಕ್ರೀಡಾ ಇಲಾಖೆಯ ಹಾಕಿ ತರಬೇತುದಾರರಾದ ಜಾಕೀರ್ ರಾಮಾಂಜಿನಿ ಮತ್ತು. ಕರಾಟೆ ಅಕಾಡಾಮಿಯ ಕರಾಟೆ ತರಬೇತುದಾರರಾದ ಜಡೇಶ, ಹುಲುಗಣ್ಣ, ಪ್ರಸಾದ್ ಹನುಮಂತ ರಾಮಕೃಷ್ಣ, ಕುಮಾರಸ್ವಾಮಿ. ಮತ್ತು ಪೋಷಕರುಗಳು ಉಪಸ್ಥಿತರಿದ್ದರು.