ಅಧಿವೇಶನ ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ,: ಅನ್ನಪೂರ್ಣ ನಿರ್ವಾನಿ

Ravi Talawar
ಅಧಿವೇಶನ ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ,: ಅನ್ನಪೂರ್ಣ ನಿರ್ವಾನಿ
WhatsApp Group Join Now
Telegram Group Join Now
♦ ರಾಜ್ಯ ಮಟ್ಟದ ವಿವಿಧ ಪದಾಧಿಕಾರಿಗಳ ಆಯ್ಕೆ ಸಮಾರಂಭ
 ಬೆಳಗಾವಿ.ನಗರದ  ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ(ಪಾರ್ಟಿ) ಇಂದ ನಡೆದ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ವಿಷಯದೊಂದಿಗೆ ಕೆ ಕೆ ಕೆ ಆರ್  ಪಾರ್ಟಿಯ ಉದ್ದೇಶಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷ,ಉಪಾಧ್ಯಕ್ಷ,ಪ್ರದಾನ ಕಾರ್ಯದರ್ಶಿ ಹಾಗೂ ಸಂಘಟನಾ ಕಾರ್ಯದರ್ಶಿಗಳ ಪದಾಧಿಕಾರಿಗಳ ಆಯ್ಕೆ ಯನ್ನು ರಾಜ್ಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣಾ ಅನಿಲ್ ನಿರ್ವಾನಿ ನೇತೃತ್ವದಲ್ಲಿ ಪದಾಧಿಕಾರಿಗಳ ಆದೇಶ ಪತ್ರ ನೀಡಿ ಮುಂಬರುವ ದಿನಮಾನಗಳಲ್ಲಿ ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕರೆ ನೀಡಿದ ರಾಷ್ಟ್ರೀಯ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲರು ಮಾತನಾಡುತ್ತಾ ಮುಂಬರುವ ದಿನಮಾನಗಳಲ್ಲಿ ದಕ್ಷಿಣ ಕರ್ನಾಟಕಕ್ಕೆ ಸಿಗಬೇಕಾದ ಸೇವಾ ಸವಲತ್ತುಗಳು ಉತ್ತರ ಕರ್ನಾಟಕಕ್ಕೂ ಸಿಗದೇ ಹೋದ್ರೆ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯ ಎಂಬ ಘೋಷ ವಾಕ್ಯದೊಂದಿಗೆ ಮುನ್ನಡೆದು,ಪ್ರತ್ಯೇಕ ರಾಜ್ಯಕ್ಕೆ ಹೋರಾಡುತ್ತೇವೆಂದರು.
   ಇನ್ನು ಮುನ್ನಡೆದು ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾ ಪಕ್ಷದ  ಮಹಿಳಾ ರಾಜ್ಯ ಅಧ್ಯಕ್ಷೆಯಾದ ಶ್ರೀಮತಿ ಅನ್ನಪೂರ್ಣಾ ಅನಿಲ್ ನಿರ್ವಾನಿ ಮಾತನಾಡುತ್ತಾ ಅಧಿವೇಶನ ಕೇವಲ ಕಾಟಾಚಾರಕ್ಕೆ  ನಡೆಯುತ್ತಿರುವುದು ತುಂಬಾ ನೋವನ್ನುಂಟು ಮಾಡುತ್ತಿದೆ.ಯಾಕೆಂದರೆ ಮುಗ್ಧ ಹಳ್ಳಿ ಜನರ ದಾರಿ ತಪ್ಪಿಸಲು ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಲು ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಿದ್ದರೆ ಅಂತಾ ಸಂಘಟನೆಗಳ ಹೆಸರಲ್ಲಿ ಬಣ್ಣ,ಬಣ್ಣದ ಶಾಮಿಯಾನಗಳನ್ನು ಹಾಕಿ ಅಧಿವೇಶನದ ಚರ್ಚೆ ನೋಡಲು,ಸರ್ಕಾರದಲ್ಲಿ ನಡೆಯುವ ಜಟಾಪಟಿ,ಆಗಿ ಹೋಗುಗಳ ಬಗ್ಗೆ ಚರ್ಚೆ ವೀಕ್ಷೀಸಲು ಬಂದ ಮುಗ್ಧ ಜನ ಬಣ್ಣ,ಬಣ್ಣದ ಶಾಮಿಯಾನದಲ್ಲಿ ತಮ್ಮ ಹಕ್ಕಿಗಾಗಿ ಒಂದೇ ಸಮನೆ ಕಿರುಚುತ್ತಾ ಘೋಷಣೆ ಕೂಗುತ್ತಿರುವ ಜನರನ್ನು ನೋಡುವಷ್ಟರಲ್ಲಿ ಸಂಜೆಯಾಗಿ ಏನೂ ತಿಳಿದು ಕೊಳ್ಳದೆ ವಾಪಸ್ ಊರಿಗೆ ಮರಳುವ ಪರಿಸ್ಥಿತಿ ಆಗಿದೆ.
 ಬಜ್ಜೆಟ್ನಲ್ಲೇನೆನಾಗಿದೆ ಯಾವುದು ಬೆಲೆ ಏರಿಕೆ ಏನೂ ಅರಿಯದಂತ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಆಡಳಿತ ಸರ್ಕಾರಗಳು ಯಾವುದೇ ಅಭಿವೃದ್ಧಿಯ ಚಿಂತನೆ ಮಾಡಲಾರದೆ ಕಾಲ ಹರಣ ಮಾಡುತ್ತಿವೆ ಎಂದರು.
   ಮುಂಬರುವ ಗ್ರಾ ಪಂ, ತಾ ಪಂ, ಜಿ ಪಂ,ಎಮ್ ಎಲ್ ಎ, ಎಮ್ ಎಲ್ ಸಿ, ಲೋಕಸಭಾ  ಚುನಾವಣೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಕಣಕ್ಕಿಳಿಸುವುದು ಶತ ಸಿದ್ದವೆಂದರು.
   ಮಹಿಳೆಯರಿಗೆ ಮಹಿಳಾ ಮೀಸಲಾತಿ ಜೊತೆಗೆ ಆದ್ಯತೆ ಇರುವಾಗ ಎಲ್ಲಾ ಹೆಣ್ಣು ಮಕ್ಕಳು ತಮ್ಮ ಅಧಿಕಾರ, ಹಕ್ಕನ್ನು ತಮ್ಮಿಂದಲೇ ನಡೆಸುವಂತಾಗಬೇಕೆಂದರು.
    ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಪ್ರಸಾದ ಕುಲಕರ್ಣಿ, ಜಿಲ್ಲಾ ಮಹಿಳಾ ಅಧ್ಯಕ್ಷೆ    ಭಾಗ್ಯಶ್ರೀ  ಹಣಬರ, ರಾಜ್ಯ ಉಪಾಧ್ಯಕ್ಷ ಉಮೇಶ  ದೇಶನೂರ,ಜಿಲ್ಲಾ ಪ್ರಧಾನಕಾರ್ಯದರ್ಶಿ ಆನಂದ   ದಬ್ಬನವರ, ರಾಜ್ಯ ಸಂಘಟನಾ ಕಾರ್ಯದರ್ಶಿ   ಶ್ರೀಕಾಂತ ಮಠಪತಿ ಇವರುಗಳಿಗೆ ಆದೇಶ ಪತ್ರ  ನೀಡಲಾಯಿತು.
WhatsApp Group Join Now
Telegram Group Join Now
Share This Article