ಇಸ್ರೋದ 101ನೇ ರಾಕೆಟ್​ ಉಡಾವಣೆಗೆ ಸಕಲ ಸಿದ್ಧತೆ

Ravi Talawar
ಇಸ್ರೋದ 101ನೇ ರಾಕೆಟ್​ ಉಡಾವಣೆಗೆ ಸಕಲ ಸಿದ್ಧತೆ
WhatsApp Group Join Now
Telegram Group Join Now

ಇಸ್ರೋದ 101ನೇ ರಾಕೆಟ್​ ಉಡಾವಣೆಗೆ ಸಕಲ ಸಿದ್ಧತೆಗಳು ನಡೆದಿದೆ. ಈ ಬಗ್ಗೆ ಇಸ್ರೋ ತನ್ನ ಎಕ್ಸ್​ ಖಾತೆ ಮೂಲಕ ಮಾಹಿತಿ ನೀಡಿದೆ. ಈ ಉಪಗ್ರಹವು ಭಾರತದ ಕಣ್ಗಾವಲು ಮತ್ತು ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್​ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ಇಸ್ರೋದ 101ನೇ ಉಡಾವಣೆ ಸಂಬಂಧ PSLV-C61/EOS-09ರ ಟೈಮ್‌ಲ್ಯಾಪ್ಸ್ ವಿಡಿಯೋ ಕಾಣಬಹುದು. ಇಸ್ರೋ ಜಾಗತಿಕವಾಗಿ ಸ್ಪರ್ಧಿಸುವುದಿಲ್ಲ, ಆದರೆ ಭಾರತದ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತದ ಸುರಕ್ಷತೆಗೆ ಮತ್ತು ಭದ್ರತೆ ನೀಡುವ ಬಾಹ್ಯಾಕಾಶ ಯೋಜನೆಗಳನ್ನು ವಿನ್ಯಾಸಗೊಳಿಸುವ ಮತ್ತು ಕಾರ್ಯಗತಗೊಳಿಸುವತ್ತ ಗಮನಹರಿಸಿದೆ ಎಂದು ಹೇಳಿದರು.

ಈಗಾಗಲೇ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್​ನ್ನು(PSLV) SDSC-SHARನಲ್ಲಿರುವ ಪೇಲೋಡ್ ಇಂಟಿಗ್ರೇಷನ್ ಫೆಸಿಲಿಟಿನಿಂದ (PIF) ಶ್ರೀಹರಿಕೋಟಾದ ಮೊಬೈಲ್ ಸರ್ವಿಸ್ ಟವರ್​ಗೆ (MST) ಸ್ಥಳಾಂತರಿಸಲಾಗಿದೆ. ಮೇ 18ರ ನಿಗದಿತ ಉಡಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಸ್ರೋ ಉನ್ನತ ಶಕ್ತಿಯ ರಾಡಾರ್ ಉಪಗ್ರಹವಾದ EOS-09 ಅನ್ನು ಉಡಾವಣೆ ಮಾಡಲಿದೆ. ವರದಿಗಳ ಪ್ರಕಾರ, ಇದು ಬಿಕ್ಕಟ್ಟಿನ ಸಮಯದಲ್ಲಿ ತೀಕ್ಷ್ಣ ಚಿತ್ರಗಳನ್ನು ಮತ್ತು ಅತಿವೇಗವಾಗಿ ಎಚ್ಚರಿಕೆಗಳನ್ನು ರವಾನಿಸಲಿದೆ.
WhatsApp Group Join Now
Telegram Group Join Now
Share This Article