ಮತ್ತಿಕೊಪ್ಪ ಗ್ರಾಮದಲ್ಲಿ ಭಾರಿ ಮಳೆಗೆ ಮುಖ್ಯ ಸೇತುವೆ ಕುಸಿತ, ಜನರಲ್ಲಿ ಆತಂಕ!

Ravi Talawar
ಮತ್ತಿಕೊಪ್ಪ ಗ್ರಾಮದಲ್ಲಿ ಭಾರಿ ಮಳೆಗೆ ಮುಖ್ಯ ಸೇತುವೆ ಕುಸಿತ, ಜನರಲ್ಲಿ ಆತಂಕ!
WhatsApp Group Join Now
Telegram Group Join Now

 

ನೇಸರಗಿ.ಗುರುವಾರದಂದು  ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ರಾಜ್ಯ ಹೆದ್ದಾರಿಯಿಂದ ಗ್ರಾಮಕ್ಕೆ ಬರುವ ಕುಡಿಯುವ ಭಾವಿಯ ಹತ್ತಿರ ಇರುವ ಮುಖ್ಯ ಸೇತುವೆ ಕುಸಿದಿದ್ದು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಸ್ ಪ್ರಯಾಣಕ್ಕೆ, ಹೊಲಗದ್ದೆಗಳಿಗೆ ಸಂಚರಿಸಲು, ನೇಸರಗಿ ಮತ್ತು ಬೆಳಗಾವಿ ಗೆ ಸಂಚರಿಸಲು ಇದುವೇ ಮುಖ್ಯ ಸೇತುವೆಯಾಗಿದ್ದು, ಹಿಂದಿನ ಗ್ರಾಮ ಸುತಗಟ್ಟಿಯಲ್ಲಿ ಅಪಾರ ಪ್ರಮಾಣದ ಮಳೆ ಅಗಿದ್ದು ಎರಡು ಗ್ರಾಮಗಳಲ್ಲಿ ಭಾರಿ ಮಳೆ ಆದ ಕಾರಣ ಹಳ್ಳದ ರಬ್ಬಸಕ್ಕೆ ಸೇತುವೆ ಬಿರುಕು ಬಿಟ್ಟು, ಕುಸಿತವಾಗಿದ್ದು  ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿದಿನಗಳು, ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ತೆಗೊದುಕೊಳ್ಳಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
WhatsApp Group Join Now
Telegram Group Join Now
Share This Article