ಆನ್ ಲೈನ್ ವಂಚನೆ, ಆರೋಪಿ ಬಂಧನ

Ravi Talawar
ಆನ್ ಲೈನ್ ವಂಚನೆ, ಆರೋಪಿ ಬಂಧನ
WhatsApp Group Join Now
Telegram Group Join Now
ಬಳ್ಳಾರಿ:15. ಹೆಚ್ಚಿನ ಲಾಭಾoಶ ಕೊಡಿಸಲಾಗುವುದು ಎಂದು ವಂಚಿಸಿ ಮಹಿಳೆಯರಿಂದ ಆನ್ ಲೈನ್ ಮೂಲಕ ಲಕ್ಷಾಂತರ ರೂ.ವಂಚಿಸಿದ್ದ ಆರೋಪಿಯನ್ನು ಪೋಲೀಸ್ ರು ಬಂಧಿಸಿದ್ದು, ಬಂಧಿತರಿಂದ ಸೈಬರ್ ಠಾಣೆಯ ಪೊಲೀಸ್ ರು 5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಹೊಸಪೇಟೆಯ ರಂಜಿತ್ ಬಂಧಿತ ಆರೋಪಿ. ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಕೊಡಿಸುವೆ ಎಂದು ಹೇಳಿ, ಆನ್ ಲೈನ್ ನಲ್ಲಿ 17,75,865 ರೂ.ಗಳನ್ನು ಪಡೆದು, ವಂಚನೆ ಮಾಡಿದ್ದ, ಈ ಕುರಿತು ಕಳೆದ ಏ.28 ರಂದು ಬಳ್ಳಾರಿ ನಗರದ ಸೈಬರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಡಿವೈಎಸ್ಪಿ ಡಾ.ಸಂತೋಷ್ ಚೌವ್ಹಾಣ್, ತಾಂತ್ರಿಕ ಸಾಕ್ಷಧಾರ ಸಂಗ್ರಹಿಸಿ, ಪಿಎಸ್ಐ ವಲಿ ಭಾಷಾ ಹಾಗೂ ಸಿಬ್ಬಂದಿಗಳು ಹೊಸಪೇಟೆಯಲ್ಲಿನ ಆರೋಪಿ ರಂಜಿತ್ ಅವರನ್ನು ಪತ್ತೆ ಹಚ್ಚಿ, 5 ಲಕ್ಷ ರೂ.ನಗದು ವಶಕ್ಕೆ ಪಡೆದಿದ್ದಾರೆ.
39 ಬೈಕ್ ವಶ:
ನಗರದ ನಾನಾ ಕಡೆ ಬೈಕ್ ಗಳನ್ನ ಕಳ್ಳತನ ಮಾಡಿದ ಆರೋಪಿಯನ್ನು ಪೋಲೀಸ್ ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಳ್ಳತನವಾಗಿದ್ದ 10 ಲಕ್ಷ ರೂ.ಮೌಲ್ಯದ 30 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ರೂಪನಗುಡಿ ಮೂಲದ ಪ್ರಹ್ಲಾದ್ ಬಂಧಿತ ಆರೋಪಿ. ಕಳೆದ ಮೇ.13 ರಂದು ಠಾಣೆ ವ್ಯಾಪ್ತಿಯಲ್ಲಿ ಬಂಧಿತ ಆರೋಪಿ ಸoಶಯಾಸ್ಪದವಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ, ಅನುಮಾನಗೊಂಡ ಪೋಲೀಸ್ ರು ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವ ಕುರಿತು ಬಾಯ್ಬಿಟ್ಟಿದ್ದಾನೆ. ನಂತರ 10 ಲಕ್ಷ ರೂ.ಮೌಲ್ಯದ 39 ಬೈಕ್ ಗಳನ್ನ ಪೋಲೀಸ್ ರು ಆತನಿಂದ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
WhatsApp Group Join Now
Telegram Group Join Now
Share This Article