ಹಮಾಸ್‌ ಉಗ್ರ ಸಂಘಟನೆ ವಿರುದ್ಧ ಸಿಡಿದ ಇಸ್ರೇಲ್‌; ಭಾರೀ ಸ್ಪೋಟದಲ್ಲಿ ಮಕ್ಕಳು ಸೇರಿ 70 ಮಂದಿ ಸಾವು

Ravi Talawar
ಹಮಾಸ್‌ ಉಗ್ರ ಸಂಘಟನೆ ವಿರುದ್ಧ ಸಿಡಿದ ಇಸ್ರೇಲ್‌; ಭಾರೀ ಸ್ಪೋಟದಲ್ಲಿ ಮಕ್ಕಳು ಸೇರಿ 70 ಮಂದಿ ಸಾವು
WhatsApp Group Join Now
Telegram Group Join Now

ಟೆಲ್ ಅವೀವ್: ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಶತಾಯ ಗತಾಯ ಸರ್ವನಾಶ ಮಾಡಿಯೇ ತೀರುತ್ತೇವೆ ಎಂದು ಇಸ್ರೇಲ್ ಸೇನೆ ಮುಂದುವರೆಸಿರುವ ದಾಳಿಯಲ್ಲಿ 22 ಮಕ್ಕಳ ಸೇರಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಇಸ್ರೇಲ್ ಸೇನೆ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಮಹಮದ್ ಸಿನ್ವಾರ್ ನನ್ನು ಹೊಡೆದುರುಳಿಸಿತ್ತು. ಇದೀಗ ತನ್ನ ಕಾರ್ಯಾಚರಣೆ ಮುಂದುವರೆಸಿರುವ ಇಸ್ರೇಲ್ ಸೇನೆ ಇದೀಗ ದಕ್ಷಿಣ ಗಾಜಾ ಮೇಲೂ ದಾಳಿ ನಡೆಸಿದೆ.

ಇಸ್ರೇಲ್ ಸೇನೆ ಬುಧವಾರ ಉತ್ತರ ಮತ್ತು ದಕ್ಷಿಣ ಗಾಜಾದ ಮೇಲೆ ವಾಯುದಾಳಿ ನಡೆಸಿ, ಸುಮಾರು ಎರಡು ಡಜನ್ ಮಕ್ಕಳು ಸೇರಿದಂತೆ ಕನಿಷ್ಠ 70 ಜನರನ್ನು ಕೊಂದಿದ್ದಾರೆ ಎಂದು ಆಸ್ಪತ್ರೆಗಳು ಮತ್ತು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹಮಾಸ್ ಉಗ್ರ ಗಾಮಿ ಸಂಘಟನೆಯನ್ನು ಬುಡಸಹಿತ ನಾಶ ಮಾಡುವವರೆಗೂ ಇಸ್ರೇಲ್ ಸೇನೆ ತನ್ನ ದಾಳಿ ನಿಲ್ಲುಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಒಂದು ದಿನದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಆಸ್ಪತ್ರೆಗಳು ಮತ್ತು ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರ ಗಾಜಾದ ಜಬಾಲಿಯಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್ ವಾಯುಸೇನೆ ದಾಳಿ ನಡೆಸಿದ್ದು, ಈ ದಾಳಿಗಳಲ್ಲಿ 22 ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Share This Article