ಬಲೂಚಿಸ್ತಾನ ಪಾಕಿಸ್ತಾನವಲ್ಲ, ಮಿರ್‌ ಬಲೂಚ್‌ ಸ್ವಾತಂತ್ರ್ಯ ಘೋಷಣೆ

Ravi Talawar
ಬಲೂಚಿಸ್ತಾನ ಪಾಕಿಸ್ತಾನವಲ್ಲ, ಮಿರ್‌ ಬಲೂಚ್‌ ಸ್ವಾತಂತ್ರ್ಯ ಘೋಷಣೆ
WhatsApp Group Join Now
Telegram Group Join Now

ಬಲೂಚಿಸ್ತಾನ್: ಬಲೂಚಿಸ್ತಾನ್​ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಬಲೂಚಿಸ್ತಾನ್ ಪ್ರತಿನಿಧಿ ಮಿರ್ ಯಾರ್ ಬಲೂಚ್ ಬುಧವಾರ ಈ ಪ್ರಕಟಣೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ದಶಕಗಳ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಎಕ್ಸ್​ ಹ್ಯಾಂಡಲ್​​ ಪೋಸ್ಟ್‌ನಲ್ಲಿ, ಬಲೂಚಿಸ್ತಾನ್‌ನ ಜನರು ತಮ್ಮ “ರಾಷ್ಟ್ರೀಯ ತೀರ್ಪು” ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

‘‘ತುಮ್ ಮಾರೋಗೆ ಹಮ್ ನೆಕ್ಲೆಂಗಿ, ಹಮ್ ನಸಲ್ ಬಚಾನಿ ನೆಕ್ಲಿ ಹೈ, ಆವೋ ಹಮಾರಾ ಸಾಥ್ ದೋ’’ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನ್‌ನಾದ್ಯಂತ ಬಲೂಚಿಸ್ತಾನ್ ಜನರು ಬೀದಿಗಿಳಿದಿದ್ದಾರೆ. ಇದು ಬಲೂಚಿಸ್ತಾನ್, ಪಾಕಿಸ್ತಾನವಲ್ಲ. ಜಗತ್ತು ಇನ್ನು ಮುಂದೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಎಕ್ಸ್​​ ಹ್ಯಾಂಡಲ್​ ನಲ್ಲಿ ಬರೆಯಲಾಗಿದೆ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್‌ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನ್‌ಗಳನ್ನು ಪಾಕಿಸ್ತಾನದ ಸ್ವಂತ ಜನರು ಎಂದು ಕರೆಯುವುದನ್ನು ನಿಲ್ಲಿಸುವಂತೆ ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.

ಬಲೂಚಿಸ್ತಾನದ ವಿವರಣೆ ಹೀಗಿದೆ: ಪ್ರಿಯ ಭಾರತೀಯ ದೇಶಭಕ್ತ ಮಾಧ್ಯಮಗಳು, ಯೂಟ್ಯೂಬ್ ಒಡನಾಡಿಗಳು, ಭಾರತವನ್ನು ರಕ್ಷಿಸಲು ಹೋರಾಡುವ ಬುದ್ಧಿಜೀವಿಗಳು ಬಲೂಚ್‌ಗಳನ್ನು ಪಾಕಿಸ್ತಾನದ ಸ್ವಂತ ಜನರು ಎಂದು ಕರೆಯಬೇಡಿ ಎಂದು ಇದೇ ವೇಳೆ ಮನವಿ ಮಾಡಲಾಗಿದೆ. ನಾವು ಪಾಕಿಸ್ತಾನಿಗಳಲ್ಲ, ನಾವು ಬಲೂಚಿಸ್ತಾನಿಗಳು. ಪಾಕಿಸ್ತಾನದ ಸ್ವಂತ ಜನರು ಪಂಜಾಬಿಗಳು, ಅವರು ಎಂದಿಗೂ ವಾಯು ಬಾಂಬ್ ದಾಳಿಗಳು, ಬಲವಂತದ ಕಣ್ಮರೆಗಳು ಮತ್ತು ನರಮೇಧವನ್ನು ಎದುರಿಸಲಿಲ್ಲ ಎಂದು ಬಲೂಚ್ ನಾಯಕ ಹೇಳಿಕೊಂಡಿದ್ದಾರೆ.
WhatsApp Group Join Now
Telegram Group Join Now
Share This Article