ರನ್ನ ಬೆಳಗಲಿ: ಮೇ.೧೪., ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ, (ರಿ) ಬೆಂಗಳೂರು ಆಶ್ರಯದಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಹಾಗೂ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಬಸವ ಹಾಗೂ ಅಂಬೇಡ್ಕರ ಜಯಂತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಶ್ವಗುರು ಯೂಟ್ಯೂಬ ಚಾನಲ್ ಉದ್ಘಾಟನೆ ಕಾರ್ಯಕ್ರಮವು ರವಿ ವಾರ ದಂದು ಕರ್ನಾಟಕ ಕುಲಪುರೋಹಿತ ಆಲೂರ ವೇಂಕಟರಾಯರ ಸಭಾ ಭವನ ಧಾರವಾಡದಲ್ಲಿ ಜರಗಿತು.
ಈ ವೇದಿಕೆಯಲ್ಲಿ ರನ್ನ ಬೆಳಗಲಿ ಪಟ್ಟಣದ ನಿವಾಸಿ,ಪ್ರಸ್ತುತವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀ ಮಹಾಂತೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀ? ಭಾ? ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇಖಾ ತಾನಾಜಿ ಪಾಟೀಲಗೆ ೨೦೨೫ರ ಬಸವ ಕಾಯಕ ಶ್ರೀ ರಾ? ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಪೂಜ್ಯ ಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠ, ಬುಡರಕಟ್ಟೆ ಪೂಜ್ಯ ಶ್ರೀ ಜಂಪಾ ಲಾಮಾ ಗುರೂಜಿ ಟಿಬೇಟಿಯನ್ ಮುಂಡಗೋಡ, ಪೂಜ್ಯ ಶ್ರೀ ಪರಶುರಾಮ ಮಹಾರಾಜರು ಶ್ರೀ ತುಳಜಾ ಭವಾನಿ ಸುಕ್ಷೇತ್ರ ಪೆಟ್ಲೂರ ಬಾಗಲಕೋಟೆ,ಚಂದ್ರಶೇಖರ ನುಗ್ಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಡಾ. ವಿಶ್ವನಾಥ ಧುಮಾಳ ರಾಜ್ಯಾಧ್ಯಕ್ಷರು,ಎನ್. ಎಲ್. ರಾಥೋಡ ರಾಜ್ಯ ಕಾರ್ಯದರ್ಶಿಗಳು, ತಮ್ಮಣ್ಣಾ ಮಾದರ ಉಪಪ್ರಧಾನ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವಿಜಯಪೂರ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.