ರಂಗ ಸೃಷ್ಟಿಯ ಕಲಾವಿದರಿಂದ “ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ” ನಾಟಕ ಪ್ರದರ್ಶನ

Ravi Talawar
ರಂಗ ಸೃಷ್ಟಿಯ ಕಲಾವಿದರಿಂದ “ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ” ನಾಟಕ ಪ್ರದರ್ಶನ
WhatsApp Group Join Now
Telegram Group Join Now

ಬೆಳಗಾವಿ: ಇದೇ ದಿನಾಂಕ 10-5-2025 ರಂದು ಬೆಳಗಾವಿಯಲ್ಲಿ ಜರುಗಿದ “ಮಹಾಸಾಧ್ವಿ ಹೇಮರಡ್ದಿ ಮಲ್ಲಮ್ಮ ಜಯಂತ್ಯುತ್ಸವ” ಅಂಗವಾಗಿ ನಗರದ ” ರಂಗ ಸೃಷ್ಟಿ” ಕಲಾವಿದರಿಂದ ಕನ್ನಡ ಭವನದಲ್ಲಿ ” ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ” ನಾಟಕ ಪ್ರದರ್ಶನಗೊಂಡಿತು.

ಸುಮಾರು 600 ವಷ೯ಗಳ ಹಿಂದೆ ಕನಾ೯ಟಕ- ಆಂಧ್ರಪ್ರದೇಶ ಗಡಿಯಲ್ಲಿ ಆಗಿಹೋದ ಕಥೆಯನ್ನಾಧರಿಸಿ ನಲವಡಿ ನೀಲಕಂಠ ಶಾಸ್ತ್ರೀಯವರು ಬರೆದ ನಾಟಕದ ವಿಷಯವನ್ನು ಮೂಲವಾಗಿಟ್ಟು ಮಲ್ಲಮ್ಮನ ಮೈದುನ ಮಹಾಯೋಗಿ ವೇಮನರ ಚರಿತ್ರೆಯನ್ನು ಸಹ ಸಂಕ್ಷಿಪ್ತವಾಗಿ ಅಳವಡಿಸಿ ರಚಿಸಿದ ಈ ನಾಟಕದ ಲೇಖಕರು ಪ್ರೊ.ರಾಮಕೃಷ್ಣ ಮರಾಠೆಯವರು.ನಿರ್ದೇಶಕರು ಶ್ರೀ ಶಿರೀಶ ಜೋಶಿಯವರು ಹಾಗೂ ಪ್ರಾಯೋಜಕರು ಶ್ರೀ ರಮೇಶ ಜಂಗಲ.
ಸಹಕಾರ: ರಡ್ಡಿ ಸಂಘ ಮತ್ತು ಕನ್ನಡ ಭವನ. ಪಾತ್ರವಹಿಸಿದವರು:ಶಾರದಾ ಭೋಜ,ಶಾಂತಾ ಆಚಾರ್ಯ,ಶ್ರದ್ಧಾ ಪಾಟೀಲ, ಶರಣಗೌಡ ಪಾಟೀಲ, ವಿಶ್ವನಾಥ ದೇಸಾಯಿ,ಶರಣಯ್ಯ ಮಠಪತಿ,ಎ ಎಂ ಜಯಶ್ರೀ, ಜಯಶ್ರೀ ಕ್ಷೀರಸಾಗರ,ಶೋಭಾ ಬನಶಂಕರಿ,ರಮೇಶ ಜಂಗಲ, ಶಾಂತಾ ಜಂಗಲ, ಶೈಲಜಾ ಭಿಂಗೆ,ಲತಾ ಅರಕೇರಿ, ಪಿ ಜಿ ಕೆಂಪಣ್ಣವರ,ಜ್ಯೋತಿ ಬದಾಮಿ,ಗಂಗಾ ತಿಮ್ಮನಾಯಕರ,ಜಯಶೀಲಾ ಬ್ಯಾಕೋಡ,ಪುಷ್ಪಾ ಮರಡೂರ,ರಮೇಶ ಮಿಜಿ೯ಹಾಗೂ ಸುಕಲ್ಪ ಮಠಪತಿ.
ನಾಟ್ಯಭೂಷಣ ಏಣಗಿ ಬಾಳಪ್ಪನವರ ಸಂಗೀತ ನಿರ್ದೇಶನದಲ್ಲಿ ಮಂಜುಳಾಜೋಶಿ,ಮುದ್ದುಮೋಹನ,ಸುಭದ್ರಮ್ಮ ಮನಸೂರ,ಶಿವಾನಂದ ಪಾಟೀಲ ಅವರು ಹಿನ್ನೆಲೆ ಗಾಯನ ನೀಡಿರುತ್ತಾರೆ.ತಬಲಾ ವಾದಕ ರಾಗಿ ನಾರಾಯಣ ಗಣಾಚಾರಿ, ಬೆಳಕಿನ ವಿನ್ಯಾಸಕರಾಗಿ ಗುರು ಪೇಡ್ನೇಕರ,ನೃತ್ಯ ಸಂಯೋಜಕರಾಗಿ ಶಾಂತಾ ಆಚಾರ್ಯ, ರಂಗ ಸಜ್ಜಿಕೆಗಾರರಾಗಿ ಶರಣಗೌಡ ಪಾಟೀಲ ಕಾಯ೯ ನಿವ೯ಹಿಸಿದರು.ಸಂಗೀತ- ರಮೇಶ ಮಿಜಿ೯ ಹಾಗೂ ರಂಗ ನಿವ೯ಹಣೆ- ರಾಜಕುಮಾರ ಕುಂಬಾರ ಮಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ.ಬಿ ಎಸ್ ಗವಿಮಠ, ಧಾರವಾಡ ಪೋಲೀಸ ಅಧೀಕ್ಷಕರಾದ ಶ್ರೀ ಎನ್ ವಿ ಬರಮನಿ ಯವರು ಆಗಮಿಸಿದ್ದರು.
ಕೊನೆಯಲ್ಲಿ ಎಲ್ಲರಿಗೂ ಭೋಜನ ಏಪಾ೯ಡು ಮಾಡಲಾಗಿತ್ತು.
WhatsApp Group Join Now
Telegram Group Join Now
Share This Article