ಬಳ್ಳಾರಿ ಮೇ 14.ಬಳ್ಲಾರಿಯ ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಚರಣೆಯಿಂದ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ವ್ಯಕ್ತಿಯಿಂದ ನಗದು ಹಣ ರೂ. ೫ ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ.
ನಗರದ ಲಕ್ಷ್ಮೀ ವಿ.ಎಸ್ ಇವರಿಗೆ ಹೊಸಪೇಟೆ ನಗರದ ರಂಜಿತ್ ಎಂಬುವವರು ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಏ.೨೮ ರಂದು ಹೇಳಿ ನಗದು ೧೭,೭೫,೮೬೫ ರೂ ಗಳನ್ನು ಆನ್‌ಲೈನ್ ಮೂಲಕ ಹಾಕಿಸಿಕೊಂಡು ಮೋಸ ಮಾಡಿದ್ದರು. ಪೊಲೀಸರು ಆರೋಪಿ ರಂಜಿತ್‌ನನ್ನು ವಿಚಾರಣೆಗೊಳಪಡಿಸಿ ಆತನಿಂದ ಐದು ಲಕ್ಷ ರೂ ಹಣ ಜಪ್ತುಮಾಡಲಾಗಿದೆ ಎಂದು ಸೈಬರ್ ಕ್ರೈ ಡಿವೈಎಸ್ಪಿ ಸಂತೋಷ್ ಚವಾಣ್ ಅವರು ತಿಳಿಸಿದ್ದಾರೆ.