ಘಟಪ್ರಭಾ: ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯು ಆರ್ಥಿ ಕವಾಗಿ ಬೆಳೆಯಲು ಸಹಕಾರಿ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದು ಸಹಕಾರಿಯ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ ಇದರ ಘಟಪ್ರಭಾ ಶಾಖೆಯ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಸಹಕಾರಿಯು 2785 ಸದಸ್ಯರನ್ನು ಹೊಂದಿ, 16.08 ಕೋಟಿ ಠೇವು ಸಂಗ್ರಹಿಸಿ, ₹2.53 ಕೋಟಿ ಗುಂತಾವಣೆ ಇಡಲಾಗಿದೆ ಮತ್ತು 13.33 ಕೋಟಿ ಸಾಲ ವಿತರಿಸಲಾಗಿದೆ ಎಂದರಲ್ಲದೇ ಪ್ರಸಕ್ತ ಸಾಲಿನಲ್ಲಿ ರೂ 8.75 ಲಕ್ಷ ಲಾಭಗಳಿಸಿದೆ ಎಂದರು.
ಘಟಪ್ರಭಾ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಕತ್ತಿ ಮಾತನಾಡಿ ಸಹಕಾರಿಯ ಪ್ರಮುಖ ರಾಜಸಭಾ ಸದಸ್ಯ ಈರಣ್ಣ ಕಡಾಡಿ ಅವರ ಮುಂದಾಳತ್ವದಲ್ಲಿ ಸಹಕಾರಿಯು ಪ್ರಗತಿ ಪಥದಲ್ಲಿ ನಡೆದು ಹಲವಾರು ಶಾಖೆಗಳು ತೆರೆದಿದ್ದಾರೆ ಸಹಕಾರಿಯಲ್ಲಿ ಅವರ ಕಾರ್ಯಶ್ರಮವನ್ನು ಶ್ಲಾಘಿಸಿದರು.
ಸದಸ್ಯರಾದ ಗಣೇಶ ಗಾಣಿಗಾ, ಹಾಲಪ್ಪ ಕರಿಗಾರ, ಮಹಾಂತೇಶ ಉದಗಟ್ಟಿಮಠ, ಮಲಗೌಡ ಪಾಟೀಲ, ಭೀಮಶಿ ಬಂಗಾರಿ, ರವಿ ಉಪ್ಪಾರ, ಆನಂದ ಪೂಜೇರಿ, ಶಾಖಾ ವ್ಯವಸ್ಥಾಪಕ ಪ್ರಶಾಂತ ಪಟ್ಟಣಶೆಟ್ಟಿ, ರಾಜಶೇಖರ ಕುರಬೇಟ, ಪ್ರಮೋದ ರಾವನ್ನವರ, ಬಸವರಾಜ ಗಿಡ್ಡಾಳಿ, ಮಲ್ಲಿಕಾರ್ಜುನ ಮದಿಹಳ್ಳಿ, ಗೊವಿಂದ ಖಾನಗೌಡ್ರ, ಮಾರುತಿ ಕಲ್ಲೋಳಿ ಸೇರಿದಂತೆ ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.