ಗ್ರಂಥ ಸುಟ್ಟ ಕೇಸ್;‌ ಇಂತಹ ಘಟನೆ ಮರುಕಳಿಸದಂತೆ ಸೂಚಿಸುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಗ್ರಂಥ ಸುಟ್ಟ ಕೇಸ್;‌ ಇಂತಹ ಘಟನೆ ಮರುಕಳಿಸದಂತೆ ಸೂಚಿಸುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದ ಮಸೀದಿಯ ಕೆಳ ಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿ ತನಿಖೆ ನಡೆಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಿದ ಪ್ರಕರಣವನ್ನು ಪೊಲೀಸರು ಬೇಧಿಸುತ್ತಾರೆ. ಜಿಲ್ಲೆಯಲ್ಲಿ ಧಾರ್ಮಿಕ ವಿಚಾರಗಳಲ್ಲಿ ಪದೇ ಪದೇ ಕಾನೂನು ಉಲ್ಲಂಘನೆಗಳು  ಆಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಳೊಂದಿಗೆ ಚರ್ಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸುತ್ತೇನೆಂದು ಹೇಳಿದರು.
ಪಹಲ್ಲಾಮ್ ನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ. ಭಾರತ- ಪಾಕ್ ನಡುವೆ ಕದಮ ವಿರಾಮ ಹಿನ್ನೆಲೆ ಈಗ ಯುದ್ಧ ಸ್ಥಗಿತಗೊಂಡಿದೆ. ಮುಂದೆ ಏನು ಮಾಡಬೇಕು ಎಂಬ ಚಿಂತನೆ ಮಾಡಬೇಕು. ಪೂರ್ಣ ಪ್ರಮಾಣದ ಯುದ್ಧ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಅದು ಆಗಿಲ್ಲ. ಇಷ್ಟಕ್ಕೆ ಸ್ಥಗಿತಗೊಂಡಿದೆ. ಮುಂದೆ ದೇಶವನ್ನು ಯಾವ ರೀತಿ ಕಟ್ಟಬೇಕು ಎನ್ನುವುದು ಮುಂದಿರುವ ಸವಾಲಾಗಿದೆ ಎಂದು ಹೇಳಿದರು.
1971ರಲ್ಲಿ ಇಂದಿರಾ ಗಾಂಧಿ ಮಾದರಿಯಲ್ಲಿ ಪಾಕ್ ಕಟ್ಟಿ ಹಾಕುವ ವಿಚಾರಕ್ಕೆ ಬಿಜೆಪಿಯವರೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸೇರಿ ಎಲ್ಲರೂ ಯುದ್ಧ ನಿಲ್ಲಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಈಗ ಯುದ್ಧ ನಿಂತಿದೆ. ಹಾಗಾಗಿ, ಏನೂ ಮಾಡಲು ಆಗುವುದಿಲ್ಲ ಎಂದು ಸಚಿವರು  ತಿಳಿಸಿದರು.
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿರುವ ವಿಚಾರಕ್ಕೆ ಅದು ಅಂತಾರಾಷ್ಟ್ರೀಯ ವಿಚಾರ. ಟ್ರಂಪ್ ಯಾಕೆ ಮಧ್ಯಸ್ತಿಕೆ ವಹಿಸಿದರು ಮತ್ತು ಅವರಿಗೆ ಯಾರು ಮನವಿ ಮಾಡಿಕೊಂಡರು ಎಂಬ ವಿಚಾರ ಒಂದು ದಿನ ಹೊರಗೆ ಬರುತ್ತದೆ. ಅಲ್ಲಿಯವರೆಗೆ ನಾವೆಲ್ಲಾ ಕಾಯಬೇಕು ಎಂದರು.
WhatsApp Group Join Now
Telegram Group Join Now
Share This Article