ನಾಟಕ, ಸಾಹಿತ್ಯ, ಗಮಕ ಕಲೆಯಿಂದಲೇ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ  ಡಾ.ಜೋಳದ ರಾಶಿ ದೊಡ್ಡನಗೌಡರು : ಎನ್ ಬಸವರಾಜ್

Ravi Talawar
ನಾಟಕ, ಸಾಹಿತ್ಯ, ಗಮಕ ಕಲೆಯಿಂದಲೇ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ  ಡಾ.ಜೋಳದ ರಾಶಿ ದೊಡ್ಡನಗೌಡರು : ಎನ್ ಬಸವರಾಜ್
WhatsApp Group Join Now
Telegram Group Join Now
ಬಳ್ಳಾರಿ ಮೇ 13.: ಜೋಳದರಾಶಿ ದೊಡ್ಡನಗೌಡರೂ ನಾಟಕ, ಸಾಹಿತ್ಯ, ಗಮಕ ಕಲೆಗೆ ಮಾಡಿದ  ಸೇವೆ ಅಪಾರವಾದದ್ದು ಎಂದು ಎನ್ ಬಸವರಾಜ್  ಸ್ಮರಿಸಿದರು.  ಅವರು ನಗರದ ರಾಘವ ಕಲಮಂದಿರದಲ್ಲಿ  ದೊಡ್ಡನಗೌಡರ  30ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಬಳ್ಳಾರಿ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಹಮ್ಮಿಕೊಂಡಿದ್ದ ಡಾ.ಜೋಳದರಾಶಿ ದೊಡ್ಡನಗೌಡರ 30ನೇ ವಾರ್ಷಿಕ  ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಗೌಡರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಭಾಗವಹಿಸಿ ಮಾತನಾಡಿ, ತಾಯಿ ರುದ್ರಮ್ಮ ಹಾಗೂ ತಂದೆ ಪಂಪನಗೌಡರ  ಮಗನಾಗಿ  1910 ಜುಲೈ 27 ರಂದು ಜನಿಸಿದರು. ಜೋಳದರಾಶಿಯ ಅಯ್ಯಾನವರ ಶಾಲೆ ಅಥವ ಗುಡಿಬಡಿ ಯಲ್ಲಿ 4ನೇ ತರಗತಿ ವರೆಗೆ ಓದಿದರು.ಆದರೆ ಮುಂದೆ ಅವರು ನಾಟಕ, ರಂಗಭೂಮಿಯ ಸೇವೆಯಲ್ಲಿ ತೊಡಗಿಕೊಂಡರು. ಗಡಿ ಭಾಗದಲ್ಲಿದ್ದುದರಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ  ಸಾಹಿತ್ಯ ರಚನೆ ಮಾಡಿದರು.
ಸುಮಾರು 40 ಪುಸ್ತಕಗಳನ್ನು ಬರೆದಿದ್ದಾರೆ ಗಮಕ ಕಲೆಗೆ ಅವರಿತ್ತ ಕೊಡುಗೆ ಅಪಾರವಾದುದು ಬಳ್ಳಾರಿ ರಾಘವ ರ ಶಿಷ್ಯರಾಗಿ ನಾಟಕ ರಂಗಕ್ಕೆ ಅಪಾರ ಸೇವೆ ಮಾಡಿದರು.1994 ರ ಮೇ 10 ರಂದು ಇಹಲೋಕ ತ್ಯಜಿಸಿದರು.
ಹೋಗಿ ಬರ್ತೀನಯ್ಯ ನಮ್ಮಊರಿಗೆ ಎಂಬ ಹಾಡನ್ನು ಇದನ್ನೇ ತೆಲುಗುನಲ್ಲಿ ಪೋಯಿ ವಸ್ತಾನಂಡಿ ಮಾ ಇಂಟಿಕಿ ಎಂಬ ಹಾಡನ್ನು ಬರೆದು  ಅದರಂತೆ ಮರಳಿ ಬಾರದಊರಿಗೆ ತೆರಳಿದರು.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಹಾಗು ಆಂದ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.   ಗೌಡರ  ಸಾದನೆಗಳನ್ನು ಸ್ಮರಿಸಿದರು.
 ಕಾರ್ಯಕ್ರಮವನ್ನು   ಎನ್ ಪ್ರಕಾಶ್ ನಿರೂಪಿಸಿದರು  ಸಹ ಕಾರ್ಯದರ್ಶಿ ಎಂ.ರಾಮಾಂಜನೇಯುಲು ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ, ಅಧ್ಯಕ್ಷರಾದ ಶ್ರೀ ಕೆ ಕೊಟೆಶ್ವರ ರಾವ್,ಗೌರವ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್,ಕೆ ಕೃಷ್ಣ, ಸಿ ಎ ಚೌದರಿ, ಜಿ ಪ್ರಭಾಕರ,ಕೆ ಪೊಂಪನ ಗೌಡ, ಪಿ ಶ್ರೀನಿವಾಸಲು, ವಿ ರಾಮಚಂದ್ರ ,ಶೇಷ ರೆಡ್ಡಿ, ಕಾಳಿದಾಸ,,ಕಪ್ಪಗಲ್ಲು ಪ್ರಭುದೇವ, ರಮಣಪ್ಪ ಭಜಂತ್ರಿ ಮತ್ತು ಗೌಡರ ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article