ಭಾರತೀಯ ಸಾಹಿತ್ಯ ಈ ನೆಲದ ಸಂಸ್ಕೃತಿಯ ರಾಯಭಾರಿ: ಜ್ಯೋತಿ ಬದಾಮಿ

Ravi Talawar
ಭಾರತೀಯ ಸಾಹಿತ್ಯ ಈ ನೆಲದ ಸಂಸ್ಕೃತಿಯ ರಾಯಭಾರಿ: ಜ್ಯೋತಿ ಬದಾಮಿ
WhatsApp Group Join Now
Telegram Group Join Now

ಬೆಳಗಾವಿ: ಅಖಿಲ ಭಾರತ ಕವಯತ್ರಿಯರ ಸಂಘಟನೆ ಬೆಳಗಾವಿ ಸದಸ್ಯರಿಂದ‌ ರಜತ ಮಹೋತ್ಸವ ನಿಮಿತ್ತ ಸಂಗೀತ ಕಾರ್ಯಕ್ರಮ ಸಂಸ್ಥಾಪನಾ ದಿನಾಚರಣೆ ಯನ್ನು ಮೇ 12 ರಂದು ಆಚರಿಸಲಾಯಿತು. ಐಪಿಸಿರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಬದಾಮಿ ಸಸಿಗೆ  ನೀರೆರೆಯುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಖಿಲ ಭಾರತ ಕವಯತ್ರಿಯರು 25 ವರ್ಷಗಳ ವರೆಗೆ 24 ರಾಷ್ಟ್ರೀಯ ಸಮ್ಮೇಳನ ಹಾಗು 16 ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನಗಳನ್ನು ಆಯೋಜಿಸಿ ಭಾರತೀಯ ಸಾಹಿತ್ಯ ಸಂಸ್ಕೃತಿಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ ಯಾಗಿದೆ.ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ12 ಸಾವಿರ ಸದಸ್ಯರನ್ನು ಹೊಂದಿದೆ. ಈ ವರ್ಷ 25 ನೇ ರಜತ ಮಹೋತ್ಸವ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಅಸ್ಸಾಂ ನ ಗೌಹಾತಿಯಲ್ಲಿ ನಡೆಯುತ್ತಿದೆ  ಎಂದು ಸಂಸ್ಥೆ ನಡೆದು ಬಂದ ಯಶಸ್ಸಿನ ದಾರಿಯ ಕುರಿತು ಮಾಹಿತಿ ನೀಡಿದರು. ಬೆಳಗಾವಿಯಲ್ಲಿ 22 ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಅದ್ದೂರಿಯಾಗಿ ನಡೆಸಿದ ಕುರಿತು ಮೆಲುಕು ಹಾಕಿದರು .

25 ನೆ ಸಂಸ್ಥಾಪನಾ ದಿನಾಚರಣೆ,ಬುದ್ದ ಜಯಂತಿ ಮತ್ತು ತಾಯಂದಿರು ದಿನಾಚರಣೆ ಅಂಗವಾಗಿ, ಹಿರಿಯ ಸದಸ್ಯೆಸುನಂದಾ ಮುಳೆ,ಲಲಿತಾ ಹಿರೇಮಠ ಸಂಗಡಿಗರು,
ಸರ್ವಮಂಗಳ ಅರಳಿಮಟ್ಟಿ, ರಾಜೇಶ್ವರಿ ಹಿರೇಮಠ,ಶೈಲಜಾ ಕುಲಕರ್ಣಿ,ಪದ್ಮಾ ಹೊಸಕೋಟಿ,ಪೂಜಾ ನಾಯಕ ಸಂಗಡಿಗರು ದೇಶ ಭಕ್ತಿ ಗೀತೆಗಳು,
ಭಾವಗೀತೆಗಳು,ಕಾವ್ಯ ಗಾಯನ, ಅಮ್ಮನ ಕುರಿತು ಹಾಡುಗಳನ್ನು ಹಾಡಿ ರಂಜಿಸಿದರು.

ಪೂಜಾ ನಾಯಕ ಪ್ರಾರ್ಥನೆ ಸಲ್ಲಿಸಿದರು.ನಂದಾಗಾರ್ಗಿ ನಿರೂಪಿಸಿದರು.ಜಯಶೀಲ ಬ್ಯಾಕೋಡ ವಂದಿಸಿದರು.ಡಾ.ಗಂಗಾಸ್ವಾಮಿ,ಹೀರಾ ಚೌಗುಲೆ,ಶುಭಾ ತೆಲಸಂಗ,ಸಬಿತಾ , ಸುಜಾತಾ ಪಾಟೀಲ,ಗಿರಿಜಾ  ಮುಳಗುಂದ ಇನ್ನೂ ಹಲವು ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

WhatsApp Group Join Now
Telegram Group Join Now
Share This Article