ಬಾಲ ಬಿಚ್ಚಿದರೆ ಹುಷಾರ್; ಮಾಜಿ ಹಾಲಿ  ರೌಡಿಶೀಟರ್ ಗಳಿಗೆ ಎಸ್. ಪಿ ಶೋಭಾ ರಾಣಿ ಖಡಕ್ ವಾರ್ನಿಂಗ್ 

Ravi Talawar
ಬಾಲ ಬಿಚ್ಚಿದರೆ ಹುಷಾರ್; ಮಾಜಿ ಹಾಲಿ  ರೌಡಿಶೀಟರ್ ಗಳಿಗೆ ಎಸ್. ಪಿ ಶೋಭಾ ರಾಣಿ ಖಡಕ್ ವಾರ್ನಿಂಗ್ 
WhatsApp Group Join Now
Telegram Group Join Now
ಬಳ್ಳಾರಿ:ಮೇ.13 : ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದು ಬೆಳಿಗ್ಗೆ ಎಸ್ಪಿ ಡಾ.ಶೋಭಾರಾಣಿಯವರು  ರೌಡಿಶೀಟರ್ ಗಳ ಪರೇಡ್ ನಡೆಸಿ ರೌಡಿಶೀಟರ್ಗಳಿಗೆ  ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ವಾರ್ನಿಂಗ್ ನೀಡಿದರು.
ಜಿಲ್ಲೆಯ ಒಟ್ಟು 17 ಪೋಲಿಸ್ ಠಾಣೆಗಳ ವ್ಯಾಪ್ತಿಯ 660 ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಈ ಪರೇಡ್ ನಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ,
ನಗರದ ಕೌಲ್ ಬಜಾರ್, ಗಾಧಿನಗರ, ಬ್ರೂಸ್ ಪೇಟೆ, ಎಪಿಎಂಸಿ, ಬಳ್ಳಾರಿ ಗ್ರಾಮೀಣ, ಕುರುಗೋಡು ಪೋಲಿಸ್ ಠಾಣೆ ಸೇರಿದಂತೆ ಜಿಲ್ಲೆಯ 17 ಪೋಲಿಸ್ ಠಾಣೆಯ ರೌಡಿಶೀಟರ್ ಗಳಿಗೆ ಎಸ್ಟಿ ಡಾ.ಶೋಭಾರಾಣಿಯವರು ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯ 600 ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಪೈಕಿ 67 ಜನ ಆ್ಯಕ್ಟಿವ್ ರೌಡಿಗಳಿದ್ದಾರೆಂದು ತಿಳಿದು ಬಂದಿದೆ.
ಇನ್ನು ರೌಡಿಶೀಟರ್ ಗಳಿಗೆ ಕ್ಲಾಸ್ ತೆಗೆದುಕೊಂಡ ಎಸ್. ಪಿ ಡಾ.ಶೋಭಾರಾಣಿಯವರು ಯಾರೇ ಆಗಲಿ  ಇಂದಿನ ಘಟನೆಗಳನ್ನು ಮರೆತು ಜೀವನ ಮಾಡಿ  ಮತ್ತೆ ಏನಾದರೂ ಸಮಾಜದ ಹಿತಕರ ಘಟನೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅಥವಾ
ಅಕ್ರಮ ಚಟುವಟಿಕೆಗಳಲ್ಲಿ
ಭಾಗಯಾಗದಲ್ಲಿ ಕಾನೂನು ಪ್ರಕಾರ ಯಾವುದೇ ಮುಲಾಜಿ ಇಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೌಡಿಗಳ ವೃತ್ತಿಯನ್ನು ವಿಚಾರಿಸಿದ ಎಸ್ಪಿಯವರು ಇನ್ನು ಮುಂದೆ ಕ್ರೈಂ ನಲ್ಲಿ ಯಾರು ಸಹ ಭಾಗಿಯಾಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
 ಈ ಸಂದರ್ಭದಲ್ಲಿ ಎಎಸ್ಪಿ ನವೀನ್ ಕುಮಾರ್, ಕೆ.ಪಿ.ರವಿಕುಮಾರ್, ಡಿವೈಎಸ್ಪಿಗಳಾದ ನಂದಾರೆಡ್ಡಿ, ಸೇರಿದಂತೆ ವಿವಿಧ ಠಾಣೆಗಳ ಇನ್ಸ್ ಪೆಕ್ಟರ್ ಗಳು ಪಿಎಸೈಗಳು ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article