ಮುದ್ದೇಬಿಹಾಳ: ಆಕ್ಸ್ಫರ್ಡ್ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗಕ್ಕೆ ಒಟ್ಟು 1113 ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಇದರಲ್ಲಿ ಒಟ್ಟು 4 ವಿದ್ಯಾರ್ಥಿಗಳು ಪರೀಕ್ಷೆದಿಂದ ಗೈರು ಉಳಿದರು ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು1109 ವಿದ್ಯಾರ್ಥಿಗಳು ಶೇ 90 ರಿಂದ 95 ಹೆಚ್ಚು ಫಲಿತಾಂಶ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ನಮ್ಮ ಆಕ್ಸ್ಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು 2025 ಸಾಲಿನಲ್ಲಿ 170 ಹೆಚ್ಚು ಮೆಡಿಕಲ್ ಸೀಟಿಗೆ ನಮ್ಮ ಗುರಿ ಇದೆ ಕೊಟ್ಟೆ ಕೊಡುತ್ತವೆ ಎಂದು ಆಕ್ಸ್ಫರ್ಡ್ ಸಂಸ್ಥೆ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು.ಅವರು ರವಿವಾರ
ತಾಲ್ಲೂಕಿನ ನಾಗರಬೆಟ್ಟ ಗುಡ್ಡದ ಹತ್ತಿರ ಬರುವ ಆಕ್ಸ್ಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ 2025 ರ ಸಾಲಿನ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ 90 ಕ್ಕಿಂತ( PCMB)ಹೆಚ್ಚು ಅಂಕ ಪಡೆದ ಒಟ್ಟು 550 ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿಸುಮಾರು ವರ್ಷಗಳಿಂದ ಅತಿ ಅಂಕ ಪಡೆದು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿರಂತರ ಕೊಡುತ್ತಾ ಬಂದಿದೆ. ಈ ವರ್ಷದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 90 ರಷ್ಟು ಫಲಿತಾಂಶ ಬಂದಹ ವಿದ್ಯಾರ್ಥಿಗಳಿಗೆ ಪಿಯುಸಿ ಪ್ರವೇಶಕ್ಕೆ ಅರ್ಧ ಪಿಯಲ್ಲಿ ವಿನಾಯಿತಿ ನೀಡುತ್ತವೆ,ಇದರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 95 ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಊಟ ವಸತಿ ಉಚಿತವಾಗಿ ನೀಡುತ್ತವೆ ಎಂದರು.
ಈ ವೇಳೆ ಮಾಜಿ ಸೈನಿಕ ನಾಗಲಿಂಗಯ್ಯ ಹಿರೇಮಠ ಅವರು ಮಾತನಾಡಿವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಕಟ್ಟಿಕೊಂಡು ಗುರಿ ಮುಟ್ಟವರಿಗೆ ನಿಮ್ಮಲ್ಲಿ ಚಲ ಇದ್ದರೆ ಸಾಧನೆಯನ್ನು ಮಾಡುತ್ತೀರಿ ಆದರೆ ನಿಮ್ಮ ಜೀವನದಲ್ಲಿ ಸಣ್ಣ ದಾರದ ತರವಾಗಿ ಕೆಲಸ ಮಾಡಬೇಕು, ವಿದ್ಯಾರ್ಥಿಗಳಿಗೋಸ್ಕರವಾಗಿ ಉತ್ತರ ಕರ್ನಾಟಕ ಪ್ರಖ್ಯಾತ ಪಡೆದ ಆಕ್ಸ್ಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಹುಟ್ಟಿದ ನಿಮ್ಮ ಪುಣ್ಯವಾಗಿದೆ. ಇಲ್ಲ ಕಲಿತ ವಿದ್ಯಾರ್ಥಿಗಳಿಗೆ ವಿನಯ್, ಸಂಸ್ಕಾರ ಇರುತ್ತದೆ ಎಂದರು.
ಇದೇ ವೇಳೆ ಶಿಕ್ಷಕ ಸಂಗಮೇಶ ಹುಗಾರ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕ್ರಾಂತಿ ಮಾಡಬೇಕುಂದರೆ ಮಕ್ಕಳಿಗೆ ಮೊದಲು ತಂದೆ, ತಾಯಿಯರ ಹಾಗೂ ಗುರುಗಳ ಆಶೀರ್ವಾದ ಇರಬೇಕು, ಈ ಸಂಸ್ಥೆ ಮ್ಯಾನೇಜ್ಮೆಂಟ್ ಸಹಕಾರದಿಂದ ವಿದ್ಯಾರ್ಥಿಗಳು ಪರಿಶ್ರಮ ದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಬಂದಿದೆ ಎಂದು ಕುಗ್ಗಬೇಡಿ ನಿಮ್ಮ ಚಲ ಇದ್ದರೆ ಗುರಿ ಮುಟ್ಟುತ್ತಿರಿ.ಈ ಆಕ್ಸ್ಫರ್ಡ್ ಸಂಸ್ಥೆ ಕಲಿತ ಮಕ್ಕಳು ಉನ್ನತ ಉದ್ಯೋಗದಲಿ ಇದ್ದಾರೆ.
ಈ ಸಂಸ್ಥೆಯಲ್ಲಿ ನೀಟ್ ಕಲಿತ ಪರೀಕ್ಷೆಯಲ್ಲಿ ಬರೆದ ಮೆಡಿಕಲ್ ಪ್ರವೇಶಕ್ಕೆ ಅನುವಾಗುತ್ತೇದೆ.
ತಂದೆ ತಾಯಿ ಗುರುಗಳು ರುಣ ತಿರಿಸಲಾಗುವದಿಲ್ಲ .ಎಷ್ಟು ಮಕ್ಕಳ ಬಡತನ ದಿಂದ ಇರುವ ಮಕ್ಕಳಿಗೆ ದಾರಿದ್ವೀಪವಾಗಿರುವ ಶಿಕ್ಷಣ ಸಂಸ್ಥೆ ಆಕ್ಸ್ಫರ್ಡ್ ಪಾಟೀಲ್ಸ್ ಸಂಸ್ಥೆ ಉಚಿತವಾಗಿ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.
ದಿವ್ಯ ಸಾನಿದ್ಯ ಭಾಸ್ಕರ ಷ.ಬ್ರ ಶ್ರೀ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಮಹಾಸ್ವಾಮಿಗಳು ಮುದ್ನೂರು.ಆರ್ಶಿವಚನವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಆಕ್ಸ್ಫರ್ಡ್ ಪಾಟೀಲ್ಸ್ ಸಂಸ್ಥೆ ಅಧ್ಯಕ್ಷ ಎಂ ಎಸ್ ಪಾಟೀಲ, ನಿರ್ದೇಶಕ ದರ್ಶನಗೌಡ ಪಾಟೀಲ, ಕಾಲೇಜನ ಪ್ರಾಂಶುಪಾಲ ರೇವಣಸಿದ್ದಪ್ಪ ಮುರಾಳ, ಪ್ರೌಢಶಾಲಾ ಮುಖ್ಯಗುರುಗಳಾದ ಇಸ್ಮಾಯಿಲ್ ಮಣಿಯಾರ,ರಾಜಶೇಖರ ಹಿರೇಮಠ,ಮಹಾಂತೇಶ ಬಿರಾದಾರ, ಆನಂದ ನಾವಿ,ಸೇರಿದಂತೆ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿನಿ ಸೃಷ್ಟಿ ತಳವಾರ ಪ್ರಾರ್ಥನೆಯನ್ನು ಸಲ್ಲಿಸಿದರು.
ಇಸ್ಮಾಯಿಲ್ ಮಣಿಯಾರ ಸ್ವಾಗತಿಸಿ ನಿರೂಪಿಸಿದರು.