ಬೆಳಗಾವಿ, ಮೇ 13: ಬೆಳಗಾವಿ ಟ್ಯಾಕ್ಸ್ ಪ್ರ್ಯಾಕ್ಟಿಶನರ್ಸ್ ಅಸೋಸಿಯೇಷನ್‌ನ 2025-2028 ಅವಧಿಗೆ ಆಯ್ಕೆಯಾದ ಅಧ್ಯಕ್ಷ ಶ್ರೀ ಸಂಜೀವ್ ಬಾಡಗಂಡಿ ಅವರ ನೇತೃತ್ವದ ನೂತನ ತಂಡದ ಪದಗ್ರಹಣ ಸಮಾರಂಭವು ಮೇ 13, 2024ರಂದು ನಡೆಯಲಿದೆ.
ಈ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ, ನಗರದ ಥರ್ಡ್ ರೈಲ್ವೆ ಗೇಟ್ ಬಳಿಯ ಸಾಂಟೋರಿನಿ ಹೋಟೆಲ್‌ನಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆ.ಎಸ್.ಟಿ.ಪಿ.ಎ ಅಧ್ಯಕ್ಷರು ಶ್ರೀ ಎಸ್. ಎನ್. ಪ್ರಸಾದ್, ಗೌರವ ಅತಿಥಿಗಳಾಗಿ ಕೆ.ಎಸ್.ಟಿ.ಪಿ.ಎ ಕಾರ್ಯದರ್ಶಿ ಶ್ರೀ ಮುಕುಂದ್ ಪೋಟ್ನಿಸ್, ಬಿಸಿಸಿಐ ಬೆಳಗಾವಿ ಅಧ್ಯಕ್ಷರು ಶ್ರೀ ಸಂಜು ಕತ್ತಿಶೆಟ್ಟಿ ಮತ್ತು ಬಿಸಿಸಿಐ ಕಾರ್ಯದರ್ಶಿ ಶ್ರೀ ರಾಜೇಂದ್ರ ಮುತಗೇಕರ ಅವರು ಭಾಗವಹಿಸಲಿದ್ದಾರೆ.
ಶ್ರೀ ಟಿ. ಎನ್. ಮಾಳಗೆ, ವಿಕ್ರಮ ಕೋಕಣೆ, ಸಚಿನ ಕುಲಕರ್ಣಿ, ಶಶಿ ಬಾಡಕರ, ಸೋಮಶೇಖರ್ ಸುತಾರ್ ಹಾಗೂ ತಂಡದ ಸದಸ್ಯರು ಕಾರ್ಯಕ್ರಮಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ