ಮಹಾಲಿಂಗಪುರ : ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಕಠಣ ಶ್ರಮಹಾಕದೇ ಹೋದಲ್ಲಿ ಅವರ ಭವಿಷ್ಯವು ಕತ್ತಲಾಗುತ್ತದೆ ಎಂದು ಬಾಗಲಕೋಟೆಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾದ್ಯಕ್ಷರಾದ ಮುರುಗೇಶ ಕಡ್ಲಿಮಟ್ಟಿ ಹೇಳಿದರು.
ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಸಕ್ತ ಸಾಲೀನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನೇಕಾರರ ಮಕ್ಕಳಿಗೆ ಸತ್ಕರಿಸಿ ಮಾತನಾಡಿದ ಅವರು ಇಂದಿನ ಯುವ ಜನಾಂಗವು ದಿನನಿತ್ಯ ಕಠಿಣ ಶ್ರಮ ಪಡಲು ಮುಂದಾಗಬೇಕು, ನಿಮ್ಮ ಮುಂದೆ ಬಹಳ ಸವಾಲುಗಳು ಇವೆ, ಅವಕಾಶಗಳು ಕಡಿಮೆಯಾಗುತ್ತಿವೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ತಂತ್ರಜ್ಞಾನ ಹೆಚ್ಚು ಬೆಳವಣಿಗೆ ಕಾಣುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಹೆಜ್ಜೆಯನ್ನು ಸಹ ಬಹಳ ಎಚ್ಚರದಿಂದ ಹಾಕಬೇಕು, ಬಹಶ ಶ್ರದ್ದೆಯಿಂದ ಓದಬೇಕು, ಸಮಯಕ್ಕೆ ಹೆಚ್ಚು ಮಹತ್ವನೀಡಿ ಸತತ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ನಂತರ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ನೇಕಾರ ಸಮುದಾಯದವರು ಶ್ರಮಿಕರು, ಹಾಗೂ ತೀರಾ ಕಡುಬಡವರು, ಪ್ರಾಮಾಣಿಕರು ಎಲ್ಲರೊಂದಿಗೆ ಸಮನ್ವಯಿಗಳು, ನೇಕಾರರ ಮಕ್ಕಳು ತಮ್ಮ ಕಡುಬಡತನದಲ್ಲಿಯೂ ಈ ರೀತಿಯಾದ ಸಾಧನೆ ಮಾಡುತ್ತಿರುವುದು ಶ್ಲಾಘನೀಯ, ಅಲ್ಲದೆ ವಿದ್ಯಾರ್ಥಿನಿಯರು ಸಹ ಎಲ್ಲರಿಗಿಂತಲೂ ಮುಂದೆ ಬರುತ್ತಿರುವುದು ಅವರ ಶ್ರದ್ದೆ ಮತ್ತು ಶ್ರಮಕ್ಕೆ ತೋರಿದ ಕೈಗನ್ನಡಿಯಾಗಿದೆ ಒಟ್ಟಿನಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು ಎನ್ನುವುದು ನಮ್ಮ ಬಯಕೆ, ಅಲ್ಲದೆ ವಿದ್ಯಾವಂತರಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದರು.
ನಂತರ ಮಾಡಿದ ಪುರಸಭೆ ಮಾಜಿ ಅಧ್ಯಕ್ಷ ಮತ್ತು ಸೌಜನ್ಯ ನೇಕಾರ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್.ಗೊಂಬಿ ನಗರದಲ್ಲಿ ಎಲ್ಲ ನೇಕಾರರ ಸಹಕಾರಿ ಸಂಘಗಳ ನೇರವಿನೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ನೇಕಾರ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದು ಇದು ಬೇರೆಯವರಿಗೆ ಮಾದರಿಯಾಗಲಿ, ಪ್ರೇರಣೆಯಾಗಲಿ, ಈ ಬಡವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಸುಮಾರು ೪೦ ವಿದ್ಯಾರ್ಥಿ/ ನಿಯರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭಲ್ಲಿ ಹಟಗಾರ ಸಮಾಜದ ಹಿರಿಯರಾದ ಮಲ್ಲಪ್ಪ ಬಾವಿಕಟ್ಟಿ, ಬಿ.ಡಿ ಸೋರಗಾಂವಿ, ಪುರಸಭೆ ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಶಿವಾನಂದ ತಿಪ್ಪಾ, ಶಿದಗಿರೇಪ್ಪ ಕಾಗಿ, ಸಿದ್ದರೋಡ ಮುಗಳಖೋಡ, ಕೌಜಲಗಿ ಸರ್, ಬಸವರಾಜ ಮೇಟಿ, ನಾರಣಗೌಡ ಉತ್ತಂಗಿ, ಮುರಿಗೇಪ್ಪ ಕಾಗಿ, ವಿಶ್ವನಾಥ ಕುಂದರಗಿ, ಸೇರಿದಂತೆ ಹಲವರು ಇದ್ದರು.
ಕಠಣ ಶ್ರಮ ಹಾಕದೆ ಹೋದರೆ ಭವಿಷ್ಯ ಕತ್ತಲಾಗುತ್ತದೆ: ಮುರುಗೇಶ ಕಡ್ಲಿಮಟ್ಟಿ
