ಬೈಲಹೊಂಗಲ: ಭಾರತ ದೇಶಕ್ಕೆ ಯಾವುದೇ ದೇಶದ ಭಯೋತ್ಪಾದಕರು ತಲೆಹಾಕಬಾರದು ಎಂದು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ನಮ್ಮ ರಕ್ಷಣಾ ಪಡೆಗಳು ನಾಲ್ಕೆದಿನಗಳಲ್ಲಿ ಮುಟ್ಟಿ ಕೊಂಡು ನೋಡುವಂತೆ ಮಾಡುತ್ತಿದೆ. ಇದರಿಂದ ಜಗತ್ತಿನ ರಷ್ಟ್ರಗಳು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯು ಭಾರತೀಯ ಸೈನ್ಯ ಪಡೆಗಳ ಮೇಲಿನ ವಿಶ್ವಾಸ್ ಅಭಿಮಾನ ಹತ್ತುಪಟ್ಟು ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರಗಾಮಿಗಳನ್ನು ಮಟ್ಟಹಾಕಲು ಮತ್ತು ಪಾಕಿಸ್ತಾನಕ್ಕೆ ಕಟ್ಟೆಚ್ಚರ ನೀಡಲು ಭಾರತವು 4ದಿನಗಳಿಂದ ನಡೆಸುತ್ತಿರುವ ಅಪರೇಷನ್ ಸಿಂಧೂರ ನಲ್ಲಿ ಈಗಾಗಲೆ ಅಗ್ರಗಾಮಿಗಳ ಅಡುಗತಾಣ ಹಾಗೂ ಅವರ ಬೆಂಬಲಕ್ಕೆ ನೀರತವರ ವಿರುದ್ದ ಕಾರ್ಯಾಚರಣೆ ನಡೆಸುತ್ತಿದೆ. ಭಾರತದ ಈಗಿನ ಪರಿಸ್ಥಿತಿಯಲ್ಲಿ ನಾವು ಯಾವುದೇ ಪಕ್ಷ, ಧರ್ಮ ಮೀರಿ ಒಟ್ಟಾಗಿ ಭಾರತದ ಸೇನಾ ಕಾರ್ಯಾಚರಣೆಗೆ ಬೆಂಬಲ ನೀಡಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.