ಮದುವೆಯಾದ ಎರಡನೇ ದಿನಕ್ಕೆ ಗಂಡ ಗಡಿ ರಕ್ಷಣೆಗೆ; ಸೈನಿಕರ ಕುಟುಂಬ ಹೆಮ್ಮೆ

Ravi Talawar
ಮದುವೆಯಾದ ಎರಡನೇ ದಿನಕ್ಕೆ ಗಂಡ ಗಡಿ ರಕ್ಷಣೆಗೆ; ಸೈನಿಕರ ಕುಟುಂಬ ಹೆಮ್ಮೆ
WhatsApp Group Join Now
Telegram Group Join Now

ಮಹಾರಾಷ್ಟ್ರ: ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಸೈನಿಕರ ರಜೆಯನ್ನು ರದ್ದುಗೊಳಿಸಿದೆ. ಇದರಿಂದ, ಮನೆಗೆ ಮರಳಿದ ಸೈನಿಕರು ತಮ್ಮ ಕರ್ತವ್ಯಕ್ಕೆ ತುರ್ತಾಗಿ ಮರಳಬೇಕಾಗಿದೆ. ಅಂತೆಯೇ, ತನ್ನ ಮದುವೆಗಾಗಿ ರಜೆಗೆ ಆಗಮಿಸಿದ್ದ ಯೋಧರೊಬ್ಬರು ಮದುವೆಯಾದ ಎರಡೇ ದಿನಕ್ಕೆ ವಾಪಸ್ ದೇಶ ಸೇವೆಗೆ ತೆರಳಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್ ಮೂಲದ ಮನೋಜ್ ಪಾಟೀಲ್ ಅವರು ಅರಿಶಿಣದ ಮೈಯಲ್ಲೇ ದೇಶ ಸೇವೆಗೆ ತೆರಳಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೋಜ್ ಪಾಟೀಲ್ ಅವರ ದೇಶ ಭಕ್ತಿಯನ್ನು ಜನರು ಕೊಂಡಾಡುತ್ತಿದ್ದಾರೆ.

ದೇಶ ಸೇವೆಗಾಗಿ 2017ರಲ್ಲಿ ಭಾರತೀಯ ಸೇನೆಗೆ ಸೇರಿರುವ ಮನೋಜ್ ಇದೇ ಮೇ 5 ರಂದು ಹಸೆಮಣೆ ಏರಿದ್ದರು. ಬಳಿಕ ಜೀವನ ಸಂಗಾತಿಯೊಂದಿಗೆ ಕನಸುಗಳನ್ನು ಕಟ್ಟಿಕೊಂಡು ಪ್ರಯಾಣಿಸುವ ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಈ ಮಧ್ಯೆ ಭಾರತ, ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಎಲ್ಲ ರಜೆಗಳನ್ನು ರದ್ದುಪಡಿಸಿ, ತಕ್ಷಣವೇ ವಾಪಸ್ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಬಂದಿದೆ. ಇದರಿಂದಾಗಿ ತಕ್ಷಣವೇ ದೇಶ ಸೇವೆಗೆ ಮನೋಜ್ ಮೇ 8 ರಂದು ತೆರಳಿದ್ದಾರೆ.

WhatsApp Group Join Now
Telegram Group Join Now
Share This Article