ಶ್ರೀನಗರದಲ್ಲಿ ಬೆಳಗಿನ ಜಾವ ಭಾರೀ ಸ್ಫೋಟ; ಕ್ಷಿಪಣಿ ಬಿದ್ದ ಅನುಭವ

Ravi Talawar
ಶ್ರೀನಗರದಲ್ಲಿ ಬೆಳಗಿನ ಜಾವ ಭಾರೀ ಸ್ಫೋಟ; ಕ್ಷಿಪಣಿ ಬಿದ್ದ ಅನುಭವ
WhatsApp Group Join Now
Telegram Group Join Now
ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಪೂರ್ಣವಾಗಿ ಯುದ್ಧದ ವಾತಾವರಣ ಏರ್ಪಟ್ಟಿದೆ. ಪಾಕಿಸ್ತಾನದ LOC ಬಳಿ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದೀಗ ಡ್ರೋನ್‌ ಮೂಲಕ ದಾಳಿ ನಡೆಸುತ್ತಿದ್ದು, ಪಂಜಾಬ್‌, ರಾಜಸ್ಥಾನ ಹಾಗೂ ಗುಜರಾತಿನ ಭಾಗದಲ್ಲಿ ಡ್ರೋನ್‌ಗಳ ದಾಳಿ ಆಗಿದೆ. ಆದರೆ ಭಾರತದ S-400 (ಸುದರ್ಶನ ) ಅವುಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇಂದು ಬೆಳಗ್ಗೆ ಅಮೃತ ಸರದ ಬಳಿ ಡ್ರೋನ್‌ ಹಾಗೂ ಕ್ಷಿಪಣಿಗಳ ಅವಶೇಷಗಳು ಪತ್ತೆಯಾಗಿವೆ. ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ದಾಲ್ ಸರೋವರದ ಆಳಕ್ಕೆ ಕ್ಷಿಪಣಿಯಂತಹ ವಸ್ತುವೊಂದು ಬಿದ್ದಿದ್ದು, ಶನಿವಾರ ಬೆಳಿಗ್ಗೆ ನಗರವನ್ನು ಬೆಚ್ಚಿಬೀಳಿಸಿದ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಹು ಸ್ಫೋಟಗಳ ಶಬ್ದ ಕೇಳಿಬಂದಿದೆ. ಅದೇ ಸಮಯದಲ್ಲಿ ಮೂರು ಪಾಕಿಸ್ತಾನಿ ವಾಯುನೆಲೆಗಳಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದ ವರದಿಗಳು ಬಂದಿವೆ. ಸ್ಫೋಟದ ಕುರಿತು ಯಾವುದೇ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇಂದು ಮುಂಜಾನೆ ಅಮೃತಸರದ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿ ನಡೆಸಲು ಪ್ರಯತ್ನಿಸಿದೆ.

ಭಾರತೀಯ ಪಡೆಗಳು ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ನಾಗರಿಕರನ್ನು ಅಪಾಯಕ್ಕೆ ಸಿಲುಕಿಸುವ ಡ್ರೋನ್‌ಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ನಾಶಪಡಿಸಿವೆ ಎಂದು ಭಾರತೀಯ ಸೇನೆಯು ಹೇಳಿದೆ. ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಪಡೆಗಳು ರಾತ್ರೋರಾತ್ರಿ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳು ಹಾಗೂ ಭಯೋತ್ಪಾಕ ಲಾಂಚ್‌ಪ್ಯಾಡ್ ಅನ್ನು ನಾಶಪಡಿಸಿವೆ.

WhatsApp Group Join Now
Telegram Group Join Now
Share This Article