ರಾವಲ್ಪಿಂಡಿ: ಭಾರತದ ಜೊತೆಗಿನ ಸಂಘರ್ಷವನ್ನು ತಗ್ಗಿಸುವುದಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ. ಭಾರತದ ಮೇಲೆ ಕ್ಷಿಪಣಿ, ಫಿರಂಗಿ, ಡ್ರೋನ್ ದಾಳಿ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ವಕ್ತಾರ ಅಹ್ಮದ್ ಷರೀಫ್ ಚೌಧರಿ, ಎಂದಿಗೂ ಸಂಘರ್ಷ ತಗ್ಗಿಸಲ್ಲ. ಭಾರತ ನಮಗೆ ಯಾವ ರೀತಿ ಹಾನಿ ಮಾಡಿದೆಯೋ ಅದೇ ರೀತಿ ನಾವು ಕೂಡಾ ಮಾಡಲಿದ್ದೇವೆ ಎಂದರು.
ಇಲ್ಲಿಯವರೆಗೂ ನಮ್ಮನ್ನು ನಾವು ರಕ್ಷಿಸಿಕೊಂಡಿದ್ದೇವೆ. ಭಾರತಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಸಿಗಲಿದೆ ಎಂದು ತಿಳಿಸಿದರು.
ಈ ಮಧ್ಯೆ ಸಾಂಬಾ, ಪಠಾಣ್ ಕೋಟ್ ಮತ್ತು ಜಮ್ಮುವಿ ಮತ್ತು ಉರಿಯಲ್ಲಿ ಡ್ರೋನ್ ಮತ್ತು ಭಾರಿ ಶೆಲ್ ದಾಳಿಯಾಗಿರುವುದಾಗಿ ತಿಳಿದುಬಂದಿದೆ. ಗುಜರಾತ್ ಸೇರಿದಂತೆ ಹಲವೆಡೆ ಪಾಕಿಸ್ತಾನ ಸೇನೆ ಶುಕ್ರವಾರ ರಾತ್ರಿ ನಿರಂತರವಾಗಿ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರ ಪಂಜಾಬ್, ರಾಜಸ್ಥಾನ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿದೆ. S-400 ಭಾರತದ ವಾಯು ರಕ್ಷಣಾ ವ್ಯವಸ್ಥೆಯಿಂದ ಎಲ್ಲಾ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ.