ಅಕ್ರಮ ಪಡಿತರ ಸಾಗಣೆ, 193 ಕ್ವಿಂಟಾಲ್ ಆಹಾರಧಾನ್ಯ ವಶ

Hasiru Kranti
ಅಕ್ರಮ ಪಡಿತರ ಸಾಗಣೆ, 193 ಕ್ವಿಂಟಾಲ್ ಆಹಾರಧಾನ್ಯ ವಶ
WhatsApp Group Join Now
Telegram Group Join Now
ವಿಜಯನಗರ(ಹೊಸಪೇಟೆ):, ಹೊಸಪೇಟೆ ತಾಲ್ಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದನ್ನು ಮೇ 6 ರಂದು ಪತ್ತೆಮಾಡಿ 182.6 ಕ್ವಿಂಟಾಲ್ ಅಕ್ಕಿ ಮತ್ತು 10.50 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ರಿಯಾಜ್ ತಿಳಿಸಿದ್ದಾರೆ.
ಇವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಗಣೆ ಮಾಡುತ್ತಿದ್ದ 1 ವಾಹನ ಸೇರಿ ಮೂರು ಗೋದಾಮುಗಳನ್ನು ಸೀಜ್ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸ್  ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ‌. ಸೀಜ್ ಮಾಡಿದ ಆಹಾರ ಧಾನ್ಯದ ಮೌಲ್ಯ ರೂ.6,05,660 ಗಳಾಗಿರುತ್ತದೆ.
WhatsApp Group Join Now
Telegram Group Join Now
Share This Article