ರೈತರ ಅನುಕೂಲಕ್ಕೆ ರಸಗೊಬ್ಬರ ಮಳಿಗೆ ಪ್ರಾರಂಭ – ಆನಂದ ನ್ಯಾಮಗೌಡ

Hasiru Kranti
ರೈತರ ಅನುಕೂಲಕ್ಕೆ ರಸಗೊಬ್ಬರ ಮಳಿಗೆ ಪ್ರಾರಂಭ – ಆನಂದ ನ್ಯಾಮಗೌಡ
WhatsApp Group Join Now
Telegram Group Join Now

 ಜಮಖಂಡಿ; ರೈತರಿಗೆ ಸಕಾಲಕ್ಕೆ ಯೋಗ್ಯದರದಲ್ಲಿ ರಸಗೊಬ್ಬರ, ಕ್ರಮಿನಾಶಕಗಳು ಹಾಗೂ ಉತ್ತಮ ಕಂಪನಿಗಳ ಬೀಜ ದೊರಕಿಸಿಕೊಡುವ ಉದ್ದೇಶ ದಿಂದ ನೂತನ ರಸಗೊಬ್ಬರ ಮಳಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. ಎಪಿಎಂಸಿ ಆರವಣದಲ್ಲಿ ಗುರುವಾರ ಶ್ರೀಸಿದ್ಧು ನ್ಯಾಮಗೌಡ ಸಹಕಾರ ಸಂಘದ ಆಶ್ರಯದಲ್ಲಿ ಪ್ರಾಂಭಿಸಲಾದ ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರ ಸಂಘ ಕಳೆದ ಆರು ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, 431 ಕೋಟಿಗಳಷ್ಟು ಠೇವಣಿ ಹೊಂದಿದೆ. 16916 ಜನ ಸದಸ್ಯರಿದ್ದು, 31 ಲಕ್ಷದಷ್ಟು ಶೇರು ಬಂಡವಾಳ ಹೊಂದಿದೆ. ಕಳೆದ 3 ತಿಂಗಳಲ್ಲಿ 10.18 ಲಕ್ಷ ಠೇವಣಿ ಹೊಂದಿದೆ. 6 ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಭದಲ್ಲಿದೆ. ಲಾಭಾಂಶವನ್ನು ಸದಸ್ಯರಿಗೆ ಹಂಚಲಾಗಿದೆ. ಪ್ರಸಕ್ತ ಸಾಲಿನ 4 ಕೋಟಿ10 ಲಕ್ಷರೂ. ಲಾಭಾಂಶವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವದು ಎಂದು ಹೇಳಿದರು. ಸಧ್ಯ 5 ಬ್ರ್ಯಾಂಚ್‌ಗಳಿದ್ದು ಇನ್ನೂ ಐದು ಹೊಸ ಶಾಖೆಳನ್ನು ಪ್ರಾರಂಭಿಸಲು ಯೋಚಿಸಲಾಗಿದೆ.

ಮುತ್ತಿನಕಂತಿ ಮಠದ ಪಂಡಿತಾರಾಧ್ಯ ಶಿವಲಿಂಗ ಶಿವಾಚಾರ್ಯರು, ಓಲೆ ಮಠದ ಆನಂದ ದೇವರು ರಸಗೊಬ್ಬರದ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಸವರಾಜ ನ್ಯಾಮಗೌಡ, ಮುಖಂಡರಾದ ಬಿ.ಎಸ್‌.ಸಿಂಧೂರ, ವರ್ಧಮಾನ ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ನಗರಸಭೆಯ ಸದಸ್ಯರಾದ ಸಿದ್ದು ಮೀಸಿ, ಈಶ್ವರ ವಾಳೆಣ್ಣವರ,ಅರುಣ ಕುಮಾರ ಶಾ, ಸೇರಿದಂತೆ ನಗರದ ಪ್ರಮುಖರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article