ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸಿ. ಎಚ್ ಸೋಮನಾಥ ಅಧಿಕಾರ ಸ್ವೀಕಾರ

Hasiru Kranti
ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸಿ. ಎಚ್ ಸೋಮನಾಥ ಅಧಿಕಾರ ಸ್ವೀಕಾರ
WhatsApp Group Join Now
Telegram Group Join Now
ಬಳ್ಳಾರಿ, ಮೇ 8: ನಗರದ ಸರಳಾದೇವಿ(ಎಸ್.ಎಸ್.ಎ) ಸರಕಾರಿ ಪ್ರಥಮ‌ ದರ್ಜೆ ಕಾಲೇಜಿನ ನೂತನ‌ ಪ್ರಾಚಾರ್ಯರಾಗಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.‌ಸಿ.‌ಎಚ್ ಸೋಮನಾಥ ಅವರು ಅಧಿಕಾರ ಸ್ವೀಕರಿಸಿದರು.
ಪ್ರಾಚಾರ್ಯರಾಗಿದ್ದ ಡಾ.‌ಪ್ರಹ್ದಾದ ಚೌಧರಿ ‌ಅವರು ಅಧಿಕಾರ ಹಸ್ತಾಂತರಿಸಿದರು.
ಈ ಹಿನ್ನಲೆಯಲ್ಲಿ ಬುಧವಾರ ‌ಕಾಲೇಜಿನ‌‌ ವಿವಿಧ ವಿಭಾಗಗಳ‌ ಮುಖ್ಯಸ್ಥರು, ಸಹಾಯಕ‌ ಪ್ರಾಧ್ಯಾಪಕರು, ಉಪನ್ಯಾಸಕರು, ನಗರದ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ‌ಮಾತನಾಡಿದ ಪ್ರಾಚಾರ್ಯ ಡಾ.‌ಸಿ‌.ಎಚ್ ಸೋಮನಾಥ ಅವರು ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕನಾಗಿ, ಸಹಾಯಕ ಪ್ರಾಧ್ಯಾಪಕನಾಗಿ‌ ಸುಮಾರು ಮೂರು ದಶಕಗ ಕಾಲ ಕರ್ತವ್ಯ ನಿರ್ವಹಿಸಿದ ತಮಗೆ ಸಂತಸವಾಗಿದೆ. ಈ‌ ಅವಕಾಶ ಕಲ್ಪಿಸಿದ ಕಾಲೇಜಿನ ಆಡಳಿತ ‌ಮಂಡಳಿ ಅಧ್ಯಕ್ಷರೂ ಆದ ನಗರ ಶಾಸಕ‌ ನಾರಾ ಭರತರೆಡ್ಡಿ ಅವರಿಗೆ ಕೃತಜ್ಞನಾಗಿದ್ದೇನೆ.‌ ಎರಡು‌ ತಿಂಗಳು ‌ಉತ್ತಮವಾಗಿ ಸೇವೆ ಸಲ್ಲಿಸಲು ಎಲ್ಲಾ‌ವಿಭಾಗಗಳ ಮುಖ್ಯಸ್ಥರು,  ಉಪನ್ಯಾಸಕರು, ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು‌ ಕೋರಿದರು.
ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ‌ ಜಿಲ್ಲಾಧ್ಯಕ್ಷ ಡಾ.‌ಟಿ. ದುರುಗಪ್ಪ ಅವರು‌ ಮಾತನಾಡಿ ಪ್ರಾಚಾರ್ಯರಾಗಿ ಹಿರಿಯ ಪ್ರಾಧ್ಯಾಪಕ ಡಾ.‌ಸಿ ಎಚ್ ಸೋಮನಾಥ ಅವರು‌ ಅಧಿಕಾರ ಸ್ವೀಕರಿಸಿರುವುದು‌ ತಮಗೆಲ್ಲಾ ಸಂತೋಷವಾಗಿದೆ. ಕಾಲೇಜಿನ ಇತಿಹಾಸದಲ್ಲಿ ಪರಿಶಿಷ್ಟರೊಬ್ಬರು ಮೊದಲಬಾರಿಗೆ ಪ್ರಾಚಾರ್ಯರಾಗುವ ಮೂಲಕ ದಾಖಲೆ‌ಯೊಂದನ್ನು ನಿರ್ಮಿಸಿದ್ದಾರೆ. ಇವರಿಗೆ ನಮ್ಮ ಸಂಘ ಸಹಕಾರ ಬೆಂಬಲ‌ ನೀಡಲಿದೆ ಎಂದರು.
ಇತಿಹಾಸದ ವಿಭಾಗದ ನಿವೃತ್ತ‌ ಮುಖ್ಯಸ್ಥ ಡಾ. ರಾಮಾಂಜನೇಯ, ಉಪನ್ಯಾಸಕ‌ ಸಮೀಉಲ್ಲಾ, ಹರೀಶ್, ಪತ್ರಿಕೋದ್ಯಮ ‌ವಿಭಾಗದ ಉಪನ್ಯಾಸಕ ಸಿ.ಮಂಜುನಾಥ ಮತ್ತಿತರರು ಮಾತನಾಡಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.‌ ಮಂಜುನಾಥ್ ಎಸ್ ಅವರು‌ ಸ್ವಾಗತಿಸಿ, ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ‌ಸ್ವಯಂ‌ ನಿವೃತ್ತಿ‌ ಪಡೆದ ಕಾಲೇಜಿನ ಅಧೀಕ್ಷಕ ಮೌನೇಶ್ ಅವರನ್ನು ಸತ್ಕರಿಸಿ‌ ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.‌ದಸ್ತಗಿರಿ ಸಾಬ್ ದಿನ್ನಿ‌ ಸೇರಿದಂತೆ ವಿಭಾಗಗಳ ಮುಖಸ್ಥರು, ಉಪನ್ಯಾಸಕರು, ವಿವಿಧ ಸಂಘಗಳ‌ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article