ನವದೆಹಲಿ, ಮೇ 05: ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಕರೆದ ಕಾಂಗ್ರೆಸ್ ನಾಯಕ ಅಜಯ್ ರಾಯ್ಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕ ಅಜಯ್ ರೈ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಲೇವಡಿ ಮಾಡಿ, ಅದರ ಮೇಲೆ ನಿಂಬೆ ಮತ್ತು ಮೆಣಸಿನಕಾಯಿ ನೇತುಹಾಕುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು.
24 ಗಂಟೆಗಳ ಹಿಂದೆ ಚರಣ್‌ಜಿತ್ ಸಿಂಗ್ ಚನ್ನಿ ಸರ್ಜಿಕಲ್ ಸ್ಟ್ರೈಕ್‌ಗೆ ಪುರಾವೆ ಕೇಳುತ್ತಿದ್ದರು, ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ನಂತರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸಿ ಆಟಿಕೆ ವಿಮಾನವನ್ನು ತೋರಿಸುತ್ತಾರೆ ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೇವಲ ದೊಡ್ಡ ಮಾತುಗಳನ್ನಾಡಿದೆ ಎಂದು ಅಜಯ್ ರಾಯ್ ಭಾನುವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ, ಆದರೆ ಅವು ಹ್ಯಾಂಗರ್‌ನಲ್ಲಿ ಬಿದ್ದಿವೆ ಮತ್ತು ಅವುಗಳ ಮೇಲೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ನೇತಾಡುತ್ತಿವೆ ಎಂದ ರಾಯ್ ರಫೇಲ್ ಎಂದು ಬರೆದು ನಿಂಬೆ-ಮೆಣಸಿನಕಾಯಿ ತೂಗು ಹಾಕಿರುವ ಆಟಿಕೆ ವಿಮಾನವನ್ನು ತೋರಿಸಿದರು.