ಬಳ್ಳಾರಿ ಅಂಚೆ ವಿಭಾಗಕ್ಕೆ 17 ರಾಜ್ಯ ಪ್ರಶಸ್ತಿಗಳ ಮೆರುಗು-ಪಿ.ಚಿದಾನಂದ

Ravi Talawar
ಬಳ್ಳಾರಿ ಅಂಚೆ ವಿಭಾಗಕ್ಕೆ 17 ರಾಜ್ಯ ಪ್ರಶಸ್ತಿಗಳ ಮೆರುಗು-ಪಿ.ಚಿದಾನಂದ
WhatsApp Group Join Now
Telegram Group Join Now
 ಬಳ್ಳಾರಿ ಮೇ 02…  ಭಾರತೀಯ ಅಂಚೆ ಇಲಾಖೆಯು 2024-25ನೇ ಅರ್ಥಿಕ ವರ್ಷದಲ್ಲಿ ಹಮ್ಮಿಕೊಂಡ ಹಲವು ಅಭಿಯಾನ ಗಳಲ್ಲಿ ಮತ್ತು ವಾರ್ಷಿಕ ನಿಗದಿತ ಗುರಿ ಸಾಧನೆಯಲ್ಲಿ ಗಣನೀಯ ಸಾಧನೆ ತೋರುವ ಮೂಲಕ ಬಳ್ಳಾರಿ ಅಂಚೆ ವಿಭಾಗವು ಅತ್ತ್ಯುತ್ತಮವಾಗಿ ಪ್ರದರ್ಶನ ನೀಡಿ ಇದೇ ಏಪ್ರಿಲ್ 29 ರಂದು ರಂದು ಅರಮನೆ ನಗರಿ ಮೈಸೂರಿನ ವಿಂಡ್ ಫ್ಲವರ್ ರೆಸಾರ್ಟ್ ನಲ್ಲಿ  ಹಮ್ಮಿಕೊಂಡಿದ್ದ ‘ಉನ್ನತಿ’ ಕರ್ನಾಟಕ ವೃತ್ತದ 2024-25 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ಒಟ್ಟು 17 ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡು ಅತಿಹೆಚ್ಚು ಬಹುಮಾನ ಪಡೆದ ವಿಭಾಗವಾಗಿ ಹೊರಹೊಮ್ಮಿದೆ.
ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್  ರಾಜೇಂದ್ರ ಕುಮಾರ್ ರವರು ಅಭಿನಂದಿಸಿ, ಪ್ರಶಸ್ತಿ ಪದಕಗಳನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗವು   ರಾಜ್ಯದಲ್ಲೇ ಅತಿ ಹೆಚ್ಚು ಅಂಚೆ ಉಳಿತಾಯ ಖಾತೆ ತೆರೆಯುವಲ್ಲಿ ಹಾಗೂ ನೂತನ ಅಂಚೆ ಜೀವ ವಿಮೆ ಹಣ ಸಂಗ್ರಹದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ, ವಾರ್ಷಿಕ ನಿವ್ವಳ ಖಾತೆ ವಿಭಾಗದಲ್ಲಿ  ಹಾಗೂ ರಾಷ್ಟ್ರಮಟ್ಟದ ಪತ್ರ ಲೇಖನ ಸ್ಪರ್ಧೆಯ ಅನುಷ್ಟಾನದಲ್ಲಿ ಬಳ್ಳಾರಿ ಅಂಚೆ ವಿಭಾಗ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಅಂಚೆ ಅಧೀಕ್ಷಕರಾದ  ಪದ್ಮಶಾಲಿ ಚಿದಾನಂದ ರವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಜೀವ ವಿಮಾ ಕ್ಷೇತ್ರದಲ್ಲಿ ಉಪ ವಿಭಾಗ ಮಟ್ಟದಲ್ಲಿ ಕೂಡ್ಲಿಗಿ ಮತ್ತು ಹರಪನಹಳ್ಳಿ ಉಪ ವಿಭಾಗಗಳು ಅತ್ಯುತ್ತಮ ಸೇವೆ ನೀಡಿದ ಪ್ರಶಸ್ತಿಗೆ ಭಾಜನ ವಾದವು.  ಶಶಿಕುಮಾರ್ ಹಿರೇಮಠ್ ಮತ್ತು ಶ್ರೀಕಾಂತ್ ನೀಲಕಂಠಿ ಪ್ರಶಸ್ತಿಗಳನ್ನು ಪಡೆದರು. ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ ನೋಂದಣಿಯಲ್ಲಿ  ಬಳ್ಳಾರಿ ಪ್ರಧಾನ ಅಂಚೆ ಕಚೇರಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ ಮತ್ತು ಅತ್ತ್ಯುತ್ತಮವಾಗಿ ಜೀವ ವಿಮೆ ಸೇವೆ ನೀಡಿದ ವಿಭಾಗದಲ್ಲಿ ಹೊಸಪೇಟೆ ಪ್ರಧಾನ ಅಂಚೆ ಕಚೇರಿ ದ್ವಿತೀಯ ಸ್ಥಾನ ಪಡೆಯಿತು. ಬಳ್ಳಾರಿಯ  ರಾಜಶೇಖರ ಹಾಗೂ ಹೊಸಪೇಟೆಯ ರಾಮರಾವ್, ಸಿದ್ದಪ್ಪ ಭಾವಿಕಟ್ಟಿ ಮತ್ತು ಶಿವಾನಂದ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಅಂಚೆ ಜೀವವಿಮಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಭಿಯಾನದಲ್ಲಿ ಬಳ್ಳಾರಿ ವಿಭಾಗ ರಾಜ್ಯಕ್ಕೆ ಪ್ರಥಮ, ವೈಯಕ್ತಿಕ ವಿಭಾಗದಲ್ಲಿ  ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಮಾರುತಿ ಉಪ್ಪಾರಟ್ಟಿ, ಇಲಾಖಾ ನೌಕರರ ವಿಭಾಗದಲ್ಲಿ ಕೂಡ್ಲಿಗಿ ಅಂಚೆ ಪಾಲಕ  ವೆಂಕಟೇಶ ಕೆ, ಬಿ ಟಿ ಪಿ ಎಸ್ ಅಂಚೆ ಕಚೇರಿಯ ಅಂಚೆ ಪಾಲಕ  ನಾಗರಾಜ್ ರಾವ್, ಗ್ರಾಮೀಣ್ ಅಂಚೆ ನೌಕರ ವಿಭಾಗದಲ್ಲಿ ಕೂಡ್ಲಿಗಿ ಯ ಊರಮ್ಮ ಟೆಂಪಲ್ ಶಾಖಾ ಅಂಚೆ ಕಚೇರಿಯ ಶ್ರೀಮತಿ ಜಲಜಾಕ್ಷಿ, ನೇರ ಪ್ರತಿನಿಧಿ ವಿಭಾಗದಲ್ಲಿ ಮಲ್ಲೇಶ್, ಉಜ್ಜಯಿನಿ ಮಠದ ವೀರೇಶ ಪ್ರಶಸ್ತಿಗಳನ್ನು  ರಾಜೇಂದ್ರ ಕುಮಾರ್, ಕರ್ನಾಟಕ ವೃತ್ತ ದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರವರಿಂದ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ಅಂಚೆ ಸೇವೆಗಳ ನಿರ್ದೇಶಕರಾದ  ಸಂದೇಶ ಮಹದೇವಪ್ಪ, ಶ್ರೀಮತಿ ವಿ. ತಾರ ಹಾಗೂ ರಾಜ್ಯದ ಅಂಚೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳ ಅನುಷ್ಟಾನ, ಹೊಸ ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಬಳ್ಳಾರಿ ವಿಭಾಗದ ಅಂಚೆ ಸಿಬ್ಬಂದಿಗಳು ಒಂದು ತಂಡವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ಬಳ್ಳಾರಿಗೆ ಈ ಬಹುಮಾನಗಳು ಸಂದಾಯವಾಗಿದೆ. ಇದರ ಎಲ್ಲಾ ಶ್ರೇಯ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸಮಸ್ತ ಅಂಚೆ ಸಿಬ್ಬಂದಿಗೆ ಸಲ್ಲುತ್ತದೆ ಎಂದು ಅಂಚೆ ಅಧೀಕ್ಷಕರಾದ  ಪದ್ಮಶಾಲಿ ಚಿದಾನಂದ್ ರವರು ಸಿಬ್ಬಂದಿಗಳಿಗೆ  ಅಭಿನಂದಿಸಿದರು.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು, ವಿಮಾ ಯೋಜನೆಗಳು, ಮನೆಬಾಗಿಲಿಗೆ ಡಿಬಿಟಿ ಆಯ್ಕೆಗಳು  ಮತ್ತು ಪತ್ರ ವ್ಯವಹಾರಗಳು ಕಟ್ಟಕಡೆಯ ಪ್ರತಿ ನಾಗರಿಕನಿಗೂ ಸುಲಭವಾಗಿ ಸಿಗುತ್ತಾ ಆರ್ಥಿಕ ಸುಭಧ್ರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಜನ ಸಾಮಾನ್ಯರು ಇದರ ಲಾಭ ಪಡೆದುಕೊಳ್ಳಬೇಕೆಂದು ಹಾಗೂ ತಮ್ಮ ಸೇವೆಗಾಗಿ ಇಲಾಖೆ ಸದಾ ಸನ್ನದ್ದವಿದೆ ಎಂದು ಪಿ. ಚಿದಾನಂದ ಅಂಚೆ ಅಧೀಕ್ಷಕರು  ತಿಳಿಸಿದ್ದಾರೆ
WhatsApp Group Join Now
Telegram Group Join Now
Share This Article