ಬೆಂಗಳೂರು: ಅತಿ ಕಡಿಮೆ ಮತಗಳಲ್ಲಿ ಗೆದ್ದ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೀರೋ ಆಗಿದ್ದಾರೆ. ಅವರು ಲಾಹೋರ್ಗೆ ಹೋಗಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತ ಅಂತರದಲ್ಲಿ ಜಯ ಸಾಧಿಸಬಹುದು. ಮುಂದೆ ಅವರಿಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಯೂ ಸಿಗಬಹುದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಅವರು ಲಾಹೋರ್ಗೆ ಹೋಗಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತ ಅಂತರದಲ್ಲಿ ಜಯ ಸಾಧಿಸಬಹುದು. ಮುಂದೆ ಅವರಿಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಯೂ ಸಿಗಬಹುದು. ಎಲ್ಲರೂ ನಿಮ್ಮ ಜೊತೆಗಿದ್ದೀನಿ ಎಂದು ಹೇಳುವಾಗ ಸಿದ್ದರಾಮಯ್ಯ ನಿಮ್ಮ ಜೊತೆಗಿಲ್ಲ ಎನ್ನುತ್ತಾರೆ ಎಂದಿದ್ದಾರೆ.
ಶಾಂತಿದೂತ ಸಿದ್ದರಾಮಯ್ಯ ನಿನ್ನೆ ಪೊಲಿಸ್ ಅಧಿಕಾರಿ ಕಪಾಳಕ್ಕೆ ಹೊಡಿಯೋಕೆ ಹೋಗಿದ್ದರು, ಎಸ್ಪಿ ಇವರ ಮನೆ ಕಸ ಗುಡಿಸೊ ಆಳ?. ಡಿಸಿನ ಕತ್ ಹಿಡಿದು ತಳ್ಳೋದು, ಎಸ್ಪಿಗೆ ಏಕವಚನದಲ್ಲಿ ಮಾತಾಡೋದು. ಡಿಸಿ, ಅವರನ್ನೇ ಸ್ಟೇಜ್ನಿಂದ ತಳ್ತಾರೆ. ಸಿಎಂ ಆಗಿ ಬಹಳ ದಿನ ಇರಲ್ಲ. ನವಂಬರ್ ಲಾಸ್ಟ್, ಅದೇ ಒತ್ತಡದಲ್ಲಿ ಸಿಎಂ ಮಾತಾಡ್ತಿದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಿಎಂ ನಡೆಗೆ ವಿರೋಧವಾಗಿದ್ದಾರೆ. ಪೊಲೀಸ್ ಇಲಾಖೆಗೆ ಸಿಎಂ ಅವಮಾನ ಮಾಡಿದ್ದಾರೆ. ಪೊಲೀಸ್ ಕುಟುಂಬಗಳಿಗೆ ನೋವಾಗಿದೆ ಎಂದು ಆರೋಪಿಸಿದರು. ಪೊಲಿಸರನ್ನ ಯಾರ್ ಬೇಕಾದ್ರು ಹೊಡಿಬಹುದು ಎಂಬ ಮೆಸೇಜ್ ಸಿಎಂ ಕೊಟ್ಟಿದಾರೆ ಎಂದರು.
ಬಿಜೆಪಿಯವರಿಗೆ ಒಂದು ಪ್ರತಿಭಟನೆ, ಸಭೆಗಳನ್ನು ಮಾಡೋಕೆ ಬಿಡಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್ ಇದೆಯಾ ಡಿಕೆ ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದ್ದಾರೆ.